ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಹಸುಗಳ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳು ಅಂದರ್​​ - ನಂದಿನಿ ಲೇಔಟ್ ಪೊಲೀಸರು

ಸಿಲಿಕಾನ್ ಸಿಟಿಯಲ್ಲಿ ಹಸುಗಳನ್ನು ಕಳ್ಳತನ‌ ಮಾಡುತ್ತಿದ್ದ ಐವರು ಆರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

five-arrested-for-cow-stealing

By

Published : Sep 22, 2019, 4:19 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಸುಗಳನ್ನು ಕಳ್ಳತನ‌ ಮಾಡುತ್ತಿದ್ದ ಐವರು ಆರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ, ರಘು, ಲೊಕೇಶ್, ಬಸವರಾಜ ಹಾಗೂ ರಾಘವೇಂದ್ರ ಬಂಧಿತರು.

ವಶಪಡಿಸಿಕೊಂಡ ಹಸುಗಳು

ಈ ಆರೋಪಿಗಳು ನಗರದ ರಸ್ತೆಗಳಲ್ಲಿ ಓಡಾಡಿಕೊಂಡು ಇರುತ್ತಿದ್ದ ಹಸುಗಳನ್ನೇ ಗುರಿಯಾಗಿಸಿಕೊಂಡು ಟೆಂಪೋಗೆ ಹಾಕಿಕೊಂಡು ಕೇರಳ ಮೂಲದವರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು ಎನ್ನಲಾಗಿದೆ.

ಹಸುಗಳನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ತಿಂಗಳ ಹಿಂದೆ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಚಂದ್ರು ಎಂಬುವರು ಐದು ಗೋವುಗಳನ್ನು ಕಳ್ಳತನ ಮಾಡಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಚಂದ್ರ ಪ್ರಕರಣ ದಾಖಲಿಸಿದ್ದರು. ಈ ದೂರಿನನ್ವಯ ಕುಣಿಗಲ್ ಬಳಿ ಈ ಹಸುಗಳನ್ನು ಮಾರುತ್ತಿದ್ದಾಗ ಪೊಲೀಸರ‌ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ABOUT THE AUTHOR

...view details