ಬೆಂಗಳೂರು: ಮಾಂಸಾಹಾರಿಗಳಿಗೆ ಅತಿ ಪ್ರಿಯವಾದ ಖಾದ್ಯವೆಂದರೆ ಫಿಶ್. ಸಿಲಿಕಾನ್ ಸಿಟಿ ಬೆಂಗಳೂರಿನ ಮೀನು ಪ್ರಿಯರು ನಗರದ ಕತ್ರಿಗುಪ್ಪೆಯ ಸಿಂಧೂರ ಹೋಟೆಲ್‌ನಲ್ಲಿ ಆಯೋಜಿಸಿದ್ದ ಫಿಶ್ ಮೇಳದಲ್ಲಿ ಭಾಗವಹಿಸಿ ವಿವಿಧ ಖಾದ್ಯಗಳನ್ನು ಸವಿದರು.
ಬಗೆ ಬಗೆಯ ಫಿಶ್ ಖಾದ್ಯಗಳಿಗೆ ಫಿದಾ ಆದ ಸಿಲಿಕಾನ್ ಸಿಟಿ ಜನತೆ - Fish Fair held in benglure
ಬೆಂಗಳೂರು ನಗರದ ಕತ್ರಿಗುಪ್ಪೆಯ ಸಿಂಧೂರ ಹೋಟೆಲ್‌ನಲ್ಲಿ ಫಿಶ್ ಮೇಳ ಆಯೋಜಿಸಿದ್ದು, ಸಿಲಿಕಾನ್ ಸಿಟಿ ಮಂದಿ ಕರಾವಳಿ ಫಿಶ್ ರುಚಿಯನ್ನು ಸವಿದು ಸಂತಸ ವ್ಯಕ್ತಪಡಿಸಿದರು.
![ಬಗೆ ಬಗೆಯ ಫಿಶ್ ಖಾದ್ಯಗಳಿಗೆ ಫಿದಾ ಆದ ಸಿಲಿಕಾನ್ ಸಿಟಿ ಜನತೆ ಫಿಶ್ ಖಾದ್ಯ](https://etvbharatimages.akamaized.net/etvbharat/prod-images/768-512-10534857-thumbnail-3x2-lek.jpg)
ಸಿಂಧೂರ ಹೋಟೆಲ್‌ನಲ್ಲಿ ಫಿಶ್ ಮೇಳ
ಸಿಂಧೂರ ಹೋಟೆಲ್‌ನಲ್ಲಿ ಫಿಶ್ ಮೇಳ
ಕರಾವಳಿಯ ಸಾಂಪ್ರದಾಯಿಕ ಖಾದ್ಯಗಳಾದ ಬಾಂಗಡೆ, ಕೊಕನಟ್ ಬಜ್ಜಿ, ಕೊಡಯ್ ಮಸಾಲ ಫ್ರೈ, ಫಿಶ್ ಕರಿ, ರಾಗಿ ಮಣ್ಣಿ ಹೀಗೆ ವಿವಿಧ ಬಗೆಯ 12 ಖಾದ್ಯಗಳನ್ನು ತಯಾರಿಸಲಾಗಿದ್ದು, ಸಿಲಿಕಾನ್ ಸಿಟಿ ಮಂದಿ ಕರಾವಳಿ ಫಿಶ್ ರುಚಿ ಸವಿದು ಸಂತಸ ವ್ಯಕ್ತಪಡಿಸಿದರು.
ಮೀನಿನ ಖಾದ್ಯಗಳನ್ನು ಇಷ್ಟಪಡುವ ಗ್ರಾಹಕರಿಗೆ ಒಮ್ಮೆಲೇ ತರಹೇವಾರಿ ಸೀ ಫುಡ್ ಗಳ ವೆರೈಟಿಯನ್ನು ಆಸ್ವಾದಿಸುವ ಅವಕಾಶವನ್ನು ಕಲ್ಪಿಸಲಾಗಿದ್ದು, ಇಂದು ರಾತ್ರಿವರೆಗೂ ಮತ್ಸ್ಯ ಆಹಾರ ಮೇಳ ನಡೆಯಲಿದೆ.