ಕರ್ನಾಟಕ

karnataka

ETV Bharat / city

ಉದ್ಯಾನ ನಗರಿಯಲ್ಲಿ ಮೊದಲ ಅತ್ಯಾಧುನಿಕ ಗಾಯ ಚಿಕಿತ್ಸಾ ಕೇಂದ್ರ ಆರಂಭ...‌ - undefined

ಮೊಣಕಾಲು ಸಾಲ್ವೇಜ್ ಸಮಸ್ಯೆ ಸೇರಿದಂತೆ ದೀರ್ಘಾವಧಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಚಿಕಿತ್ಸಾ ಕೇಂದ್ರ ಸಿಲಿಕಾನ್​ ಸಿಟಿಯಲ್ಲಿ ಆರಂಭಗೊಂಡಿದೆ.

ಬೆಂಗಳೂರಲ್ಲಿ ಗಾಯ ಚಿಕಿತ್ಸಾ ಕೇಂದ್ರ ಆರಂಭ

By

Published : May 8, 2019, 6:05 PM IST

ಬೆಂಗಳೂರು: ದೀರ್ಘಾವಧಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಸದುದ್ದೇಶದೊಂದಿಗೆ ಸಂಸ್ಥೆಯೊಂದು ಉದ್ಯಾನ ನಗರಿಯಲ್ಲಿ ಆರಂಭಗೊಂಡಿದೆ.

ಡಾಲ್ವಕೋಟ್ ವೂಂಡ್ ಕೇರ್ (Dalvkot wound care)ಅಪರೂಪದ ಗಾಯ ಸುರಕ್ಷಾ ಕೇಂದ್ರವಾಗಿದ್ದು, ತನ್ನ ಮೊಟ್ಟ ಮೊದಲ ಪರಿಪೂರ್ಣ ಗಾಯಗೊಂಡವರ ಚಿಕಿತ್ಸಾ ಕೇಂದ್ರವನ್ನು ಬೆಂಗಳೂರಿನ ವೈಟ್‌ ಫೀಲ್ಡ್ ನಲ್ಲಿರುವ ವೈದೇಹಿ ಕ್ಯಾಂಪಸ್‍ನಲ್ಲಿ ಇಂದು ಆರಂಭಿಸಿದೆ. ಇದುವರೆಗೂ ಭಾರತ ದೇಶದಲ್ಲಿ ಚಿಕಿತ್ಸೆ ಲಭ್ಯವಿರದ 'ಮೊಣಕಾಲು ಸಾಲ್ವೇಜ್ ಸಮಸ್ಯೆ’ಗೂ ಪರಿಹಾರ ಒದಗಿಸುವ ಕೇಂದ್ರವಾಗಿ ಆರಂಭಗೊಂಡಿದೆ.

ಬೆಂಗಳೂರಲ್ಲಿ ಗಾಯ ಚಿಕಿತ್ಸಾ ಕೇಂದ್ರ ಆರಂಭ

ಇನ್ನು ಜನರ ಜೀವನ ಶೈಲಿಯಿಂದಾಗಿ ಹೆಚ್ಚು ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ, ಉಸಿರಾಟದ ಸಮಸ್ಯೆ ಹಾಗೂ ಕ್ಯಾನ್ಸರ್​ನಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇಂತಹ ಅಸ್ವಸ್ಥತೆಯಿಂದ ಉಂಟಾಗುವ ದೀರ್ಘಾವಧಿ ಕಾಯಿಲೆಗಳು, ಗಾಯಗಳನ್ನು ಎದುರಿಸುವುದು ಕೂಡ ಸವಾಲಾಗಿ ಜನರನ್ನು ಕಾಡುತ್ತಿದೆ.

ಡಿಡಬ್ಲ್ಯುಸಿ ಇದೀಗ ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ಗಾಯದ ಸುರಕ್ಷೆಯ ಬಗ್ಗೆ ಇದುವರೆಗೂ ಇದ್ದ ನೋಟವನ್ನು ಬದಲಿಸಲು ಹೊರಟಿದೆ. ಜತೆಗೆ ತಜ್ಞ ವೈದ್ಯಕೀಯ ತಂಡದೊಂದಿಗೆ ಗಾಯಗಳನ್ನು ಗುಣಪಡಿಸಲು ಇತ್ತೀಚಿನ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಲಿದೆ.

ಇವುಗಳ ಜತೆ ಮಧುಮೇಹಿಗಳ ಕಾಲಿನ ಸುರಕ್ಷತೆ, ಶಸ್ತ್ರಚಿಕಿತ್ಸಾ ನಂತರದ ಗಾಯ ಗುಣಪಡಿಸಲು, ಎಂಡೋ ವಾಸ್ಕ್ಯುಲರ್ ಕಾರ್ಯವಿಧಾನ, ಲೇಸರ್ ಥೆರಪಿ ಹಾಗೂ ಗಾಯಗೊಂಡವರ ಪುನರ್ವಸತಿ ಕಾರ್ಯಕ್ರಮಗಳಿಗೂ ಸಹಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಡಾ. ರಮೇಶ್ ರೆಡ್ಡಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details