ಕರ್ನಾಟಕ

karnataka

ETV Bharat / city

ಶಾರ್ಟ್ ಸರ್ಕ್ಯೂಟ್​​​ನಿಂದ ಬೆಂಕಿ: ಮಳೆಯ ನಡುವೆಯೂ ಹೊತ್ತಿ ಉರಿದ ಡಾಬಾ - ದೇವನಹಳ್ಳಿ

ಶಾರ್ಟ್ ಸರ್ಕ್ಯೂಟ್​​ನಿಂದ ಡಾಬಾವೊಂದು ಹೊತ್ತಿ ಉರಿದ ಘಟನೆ ದೇವನಹಳ್ಳಿಯಲ್ಲಿ(Devanahalli fire incident) ನಡೆದಿದೆ.

Dhaba catch fire by short circuit in Devanahalli
ಶಾರ್ಟ್ ಸರ್ಕ್ಯೂಟ್​​ನಿಂದ ಹೊತ್ತಿ ಉರಿದ ಡಾಬಾ

By

Published : Nov 18, 2021, 2:25 PM IST

ದೇವನಹಳ್ಳಿ/ಬೆಂಗಳೂರು:ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ(short circuit) ಬೆಂಕಿ ಅವಘಡ ಸಂಭವಿಸಿದ್ದು, ಜಡಿ ಮಳೆಯ ನಡುವೆಯೂ ಡಾಬಾವೊಂದು ಹೊತ್ತಿ ಉರಿದ ಘಟನೆ ದೇವನಹಳ್ಳಿಯಲ್ಲಿ (Devanahalli fire incident) ನಡೆದಿದೆ.

ಶಾರ್ಟ್ ಸರ್ಕ್ಯೂಟ್​​ನಿಂದ ಹೊತ್ತಿ ಉರಿದ ಡಾಬಾ

ದೇವನಹಳ್ಳಿ ಪಟ್ಟಣದ ಬೈಪಾಸ್ ರಸ್ತೆಯ ಗಗನ್ ಡಾಬಾದಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಸಮಯದಲ್ಲಿ ಡಾಬಾದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಡಾಬಾವನ್ನ ಅವರಿಸಿದೆ. ಎಡೆಬಿಡದೆ ಮಳೆ ಸುರಿಯುತ್ತಿದ್ದರೂ, ಬೆಂಕಿ ಹತೋಟಿಗೆ ಬಂದಿಲ್ಲ. ಡಾಬಾದ ಒಳಗೆ ಮರದ ವಸ್ತುಗಳಿಂದ ಅಲಂಕಾರ ಮಾಡಲಾಗಿದ್ದು, ಇದರಿಂದ ಬೆಂಕಿಯ ಪ್ರಮಾಣ ಹೆಚ್ಚಾಗಿದೆ ಎನ್ನಲಾಗ್ತಿದೆ.

ಸದ್ಯ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ಸಂಬಂಧ ದೇವನಹಳ್ಳಿ ಟೌನ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ಮುಂದೂಡಿದ ಪಿಯು ಬೋರ್ಡ್​

ABOUT THE AUTHOR

...view details