ಕರ್ನಾಟಕ

karnataka

ETV Bharat / city

ಬೆಂಗಳೂರು ಲಘು ಸ್ಫೋಟ ಪ್ರಕರಣ: ಕೇಸ್‌ ದಾಖಲು - ಬೆಂಗಳೂರು ಲಘು ಸ್ಫೋಟ ಪ್ರಕರಣ ಎಫ್ಐಆರ್ ದಾಖಲು

ಎಂಜಿಆರ್ ಬರ್ತ್​​ಡೇ ಅಂಗವಾಗಿ ಶಾಸಕ ಎನ್.ಎ.ಹ್ಯಾರಿಸ್‌ ಹಾಗೂ ಅನೇಕರು ಕಾರ್ಯಕ್ರಮಕ್ಕೆ ತೆರಳಿದ್ದಾಗ ಲಘು ಸ್ಫೋಟವಾಗಿ ಶಾಸಕ ಹ್ಯಾರಿಸ್ ಕಾಲಿಗೆ ಪೆಟ್ಟಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕೇಂದ್ರ ವಿಭಾಗ ಪೊಲೀಸರು ಐಪಿಸಿ 426 ಅಡಿ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

FIR registered in Bangalore Light blast case
ಲಘು ಸ್ಫೋಟ ಪ್ರಕರಣದ ಕುರಿತು ಎಫ್ಐಆರ್ ದಾಖಲು

By

Published : Jan 23, 2020, 10:35 AM IST

ಬೆಂಗಳೂರು: ಎಂಜಿಆರ್ ಬರ್ತ್​​ಡೇ ಅಂಗವಾಗಿ ಶಾಸಕ ಎನ್.ಎ.ಹ್ಯಾರಿಸ್‌ ಹಾಗೂ ಅನೇಕರು ಕಾರ್ಯಕ್ರಮಕ್ಕೆ ತೆರಳಿದ್ದಾಗ ಲಘು ಸ್ಫೋಟವಾಗಿ ಶಾಸಕ ಹ್ಯಾರಿಸ್ ಕಾಲಿಗೆ ಪೆಟ್ಟಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕೇಂದ್ರ ವಿಭಾಗ ಪೊಲೀಸರು ಐಪಿಸಿ 426 ಅಡಿ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದಾರೆ.

ಲಘು ಸ್ಫೋಟ ಪ್ರಕರಣದ ಕುರಿತು ಎಫ್ಐಆರ್ ದಾಖಲು

ನಿನ್ನೆ ರಾತ್ರಿ‌ ವಿವೇಕನಗರದ ವನ್ನಾರ ಪೇಟೆಯಲ್ಲಿ ಹ್ಯಾರಿಸ್‌, ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಳಿತಿರುವಾಗ ಮೇಲಿಂದ ಬಂದ ವಸ್ತು ಸ್ಫೋಟವಾಗಿ ಶಾಸಕ ಹ್ಯಾರೀಸ್ ಕಾಲಿಗೆ ಹಾಗೂ ಕೆಲವರಿಗೆ ಗಾಯಗಳಾಗಿತ್ತು‌. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಕೆ ಕಂಡ ಹಿನ್ನೆಲೆ ಇಂದು ಆಸ್ಪತ್ರೆಯಿಂದ ಶಾಸಕ ಹ್ಯಾರಿಸ್ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

ಸಿಲಿಕಾನ್​ ಸಿಟಿಯಲ್ಲಿ ಲಘು ಸ್ಫೋಟ... ಶಾಸಕ ಎನ್.ಎ.ಹ್ಯಾರಿಸ್‌ಗೆ ಗಾಯ

ಆಸ್ಪತ್ರೆ ಮೂಲಗಳ ಪ್ರಕಾರ, ಹ್ಯಾರಿಸ್ ಬಲಗಾಲಿನ ಕೆಳ ಭಾಗದಲ್ಲಿ ಸ್ವಲ್ಪ ಸುಟ್ಟಿದ್ದು, ರಾತ್ರಿಯೇ ಚಿಕಿತ್ಸೆ ಪಡೆದು ಮನೆಗೆ ಹೋಗಲು ಸಿದ್ದರಾಗಿದ್ದರು. ಮನೆಗೆ ಹೋದ್ರೆ ಕಾರ್ಯಕರ್ತರು ಜಮಾಯಿಸುವ ಹಿನ್ನಲೆ ಆಸ್ಪತ್ರೆಯಲ್ಲೇ ಉಳಿದಿದ್ದು, ಇಂದು ಡಿಸ್ಚಾರ್ಜ್ ಆಗಲಿದ್ದಾರೆ ಎಂದಿದ್ದಾರೆ.

ಹ್ಯಾರಿಸ್ ಜೊತೆ ಇದ್ದ ಸಂಪತ್ ಕುಮಾರ್​ಗೆ ಎರಡು ಕಾಲು ಮತ್ತು ಮುಖದ ಭಾಗದಲ್ಲಿ ಗಾಯಗಳಾಗಿವೆ. ಶಿವಕುಮಾರ್ ಎಂಬುವರಿಗೆ ಎರಡು ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಲಘು ಸ್ಫೋಟ ವಿಚಾರದಲ್ಲಿ ಶಾಸಕ ಹ್ಯಾರಿಸ್ ಟಾರ್ಗೆಟ್ ಮಾಡಿದ್ದು ಯಾರು?, ಸ್ಫೋಟಗೊಂಡಿರುವುದು ಪಟಾಕಿನ ಅಥವಾ ಬೇರೆ ಏನಾದ್ರು ವಸ್ತುನಾ? ಅನ್ನೋದ್ರ ಸಂಪೂರ್ಣ ತನಿಖೆಯನ್ನು ಕೇಂದ್ರ ವಿಭಾಗ ಡಿಸಿಪಿ ರಾಥೋರ್ ತಂಡ ನಡೆಸುತ್ತಿದ್ದಾರೆ.

ABOUT THE AUTHOR

...view details