ಕರ್ನಾಟಕ

karnataka

ETV Bharat / city

ನೈಟ್​ ಕರ್ಫ್ಯೂ ಉಲ್ಲಂಘನೆ : ಗಟ್ಟಿಮೇಳ ಸೀರಿಯಲ್ ನಟರ ವಿರುದ್ಧ ಎಫ್ಐಆರ್ ದಾಖಲು - FIR register against serial actor Rakshit

ಗಟ್ಟಿಮೇಳ ಸೀರಿಯಲ್ ​​ನಟ ರಕ್ಷಿತ್​​​​​​ ಎ1 ಆರೋಪಿ, ಎ2 ನಟ ಅಭಿಷೇಕ್, ಎ3 ನಟ ರಂಜನ್, ಎ4 ನಟ ರಾಕೇಶ್, ಎ5 ನಟ ರವಿಚಂದ್ರನ್, ಎ6 ನಟ ರಕ್ಷಿತ್​​ ಪತ್ನಿ ಅನುಷಾ, ಎ7 ಸೀರಿಯಲ್​​​​​ ನಟಿ ಶರಣ್ಯಾ ಪ್ರಕರಣದ ಆರೋಪಿಗಳಾಗಿದ್ದಾರೆ..

fir register against gattimela serial actors
fir register against gattimela serial actors

By

Published : Jan 29, 2022, 6:54 PM IST

Updated : Jan 29, 2022, 7:07 PM IST

ಬೆಂಗಳೂರು :ಕನ್ನಡ ಕಿರುತೆರೆಯ ಜನಪ್ರಿಯ ಧಾರವಾಹಿ ಗಟ್ಟಿಮೇಳದ ನಟರು ನೈಟ್​ ಕರ್ಫ್ಯೂ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಕ್ಷಿತ್ ಸೇರಿ 7 ಜನರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ನೈಟ್ ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿ ಗಟ್ಟಿಮೇಳ ಸೀರಿಯಲ್ ನಟರು ಮಿಡ್ ನೈಟ್ ಪಾರ್ಟಿ ಮಾಡಿದ್ದರು. ಕೆಂಗೇರಿ ಬಳಿಯ ಲೇಕ್ ವ್ಯೂ ರೆಸಾರ್ಟ್‌ನಲ್ಲಿ ಜನವರಿ 27ರ ಮಧ್ಯರಾತ್ರಿ 1.45ರ ಸಮಯದಲ್ಲಿ ಮ್ಯೂಸಿಕ್ ಹಾಕಿ ಕುಡಿದು ಗಲಾಟೆ ನೆಡೆಸಿದ್ದರು.

ಈ ಸಂಬಂಧ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿಯ ಜೊತೆಗೂ ಗಟ್ಟಿಮೇಳ ತಂಡ ಗಲಾಟೆ ಮಾಡಿ ದಾಂಧಲೆ ಮಾಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗಟ್ಟಿಮೇಳ ಸೀರಿಯಲ್ ​​ನಟ ರಕ್ಷಿತ್​​​​​​ ಎ1 ಆರೋಪಿ, ಎ2 ನಟ ಅಭಿಷೇಕ್, ಎ3 ನಟ ರಂಜನ್, ಎ4 ನಟ ರಾಕೇಶ್, ಎ5 ನಟ ರವಿಚಂದ್ರನ್, ಎ6 ನಟ ರಕ್ಷಿತ್​​ ಪತ್ನಿ ಅನುಷಾ, ಎ7 ಸೀರಿಯಲ್​​​​​ ನಟಿ ಶರಣ್ಯಾ ಪ್ರಕರಣದ ಆರೋಪಿಗಳಾಗಿದ್ದಾರೆ. ಇವರೆಲ್ಲರ ವಿರುದ್ಧ ಎನ್‌ಡಿಎಂಎ ಆ್ಯಕ್ಟ್ ಅಡಿಯಲ್ಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 29, 2022, 7:07 PM IST

ABOUT THE AUTHOR

...view details