ಕರ್ನಾಟಕ

karnataka

ETV Bharat / city

ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ: ಮೂವರ ವಿರುದ್ಧ FIR ದಾಖಲು - Video - FIR against on three for Attack on towing staff

ಯಲಹಂಕ ನ್ಯೂಟೌನ್ ಬಳಿ ಮೂವರು ವಾಹನ ಸವಾರರು ಹೆಲ್ಮೆಟ್‌ನಿಂದ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ‌ ಮಾಡಿದ್ದಾರೆ ಎಂದು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

FIR against on three for Attack on towing staff
ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಸವಾರರು

By

Published : Jul 30, 2021, 1:05 PM IST

ಬೆಂಗಳೂರು: ಟೋಯಿಂಗ್ ಸಿಬ್ಬಂದಿ ಮೇಲೆ ಮೂವರು ವಾಹನ ಸವಾರರು ಹೆಲ್ಮೆಟ್‌ನಿಂದ ಹಲ್ಲೆ‌ ಮಾಡಿರುವ ಘಟನೆ ಯಲಹಂಕ ನ್ಯೂಟೌನ್ ಬಳಿ ನಡೆದಿದೆ.

ಯಲಹಂಕ ನ್ಯೂ ಟೌನ್‌ ಬಳಿ ಸುತ್ತಾಡುತ್ತಿದ್ದ ಸಂಚಾರ ಪೊಲೀಸರು, ರಸ್ತೆ ಅಕ್ಕ- ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಟೋಯಿಂಗ್ ಮಾಡಲಾರಂಭಿಸಿದ್ದರು. ಈ ವೇಳೆ, ನೋ ಪಾರ್ಕಿಂಗ್ ಬೋರ್ಡ್ ಇಲ್ಲದ ಹಿನ್ನೆಲೆ ಕೆಲವರು ವಾಹನ ನಿಲ್ಲಿಸಿದ್ದರು. ಫಲಕವಿಲ್ಲದ ಜಾಗದಿಂದ ವಾಹನ ಟೋಯಿಂಗ್ ಮಾಡದಂತೆ ಸಾರ್ವಜನಿಕರು ಹೇಳಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸರು ಹಾಗೂ ಸಿಬ್ಬಂದಿ, ವಾಹನಗಳನ್ನು ಎಳೆದುಕೊಂಡು ಟೋಯಿಂಗ್ ವಾಹನದಲ್ಲಿ ಇರಿಸಲು ಮುಂದಾಗಿದ್ದಾರೆ.

ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಸವಾರರು

ಈ ವೇಳೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಗಲಾಟೆ ನಡೆದಿದೆ. ಆಕ್ರೋಶಗೊಂಡ ಮೂವರು ವಾಹನ ಸವಾರರು ಹೆಲ್ಮೆಟ್‌ನಿಂದ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ‌ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಹಲ್ಲೆ ನಡೆಸಿದ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details