ಬೆಂಗಳೂರು:ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಬೆಂಗಳೂರಿನಲ್ಲಿ ಸಂಬಂಧಪಟ್ಟ ವ್ಯಾಪಾರ ಸ್ಥಳದ ಮಾಲೀಕರಿಗೆ ಫೈನ್ ಹಾಕುವ ಆದೇಶ ಇತ್ತು. ಇದೀಗ ಈ ಆದೇಶ ರಾಜ್ಯಾದ್ಯಂತ ಜಾರಿಯಾಗಲಿದೆ.
ಕೊರೊನಾ ಎರಡನೇ ಅಲೆಯ ಕಂಟ್ರೋಲ್ಗೆ ಸರ್ಕಾರ ರೆಡಿಯಾಗಿದೆ. ಇದಕ್ಕಾಗಿ ಇಂತಹ ಹೊಸ ನಿಯಮಗಳನ್ನು ರಾಜ್ಯಾದ್ಯಂತ ಜಾರಿಗೊಳಿಸಲು ರೆಡಿಯಾಗಿದೆ. ಕಾರಿನೊಳಗೆ ಒಬ್ಬರೇ ವ್ಯಕ್ತಿ ಇದ್ದಾಗ ಕಾರಿನ ಕಿಟಕಿ ಗಾಜು ಮುಚ್ಚಿದ್ದರೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ. ಕಿಟಕಿ ಅಥವಾ ಬಾಗಿಲು ತೆರೆದಿದ್ದರೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ಈ ಆದೇಶ ಹೊರಡಿಸಿದ್ದಾರೆ.