ಕರ್ನಾಟಕ

karnataka

ETV Bharat / city

ಶಾಸಕರ ನಿಧಿಗೆ ಎರಡನೇ ಕಂತಿನ 150 ಕೋಟಿ ರೂ. ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಅಸ್ತು - ಕರ್ನಾಟಕ ಶಾಸಕರ ನಿಧಿ

2020-21ನೇ ಸಾಲಿನಲ್ಲಿ ಪ್ರತಿ ಶಾಸಕರಿಗೆ ತಲಾ 1 ಕೋಟಿ ರೂ.ನಂತೆ ರೂಪಿಸಲಾದ ಕ್ರಿಯಾಯೋಜನೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಆರ್ಥಿಕ ಇಲಾಖೆ ತಿಳಿಸಿದೆ.

finance-dept
ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಅಸ್ತು

By

Published : Nov 5, 2020, 1:32 AM IST

ಬೆಂಗಳೂರು: ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಎರಡನೇ ಕಂತಿನ ಅನುದಾನವಾದ 150 ಕೋಟಿ ರೂ. ಬಿಡುಗಡೆಗೊಳಿಸಲು ಆರ್ಥಿಕ ಇಲಾಖೆ ಒಪ್ಪಿಗೆ ‌ನೀಡಿದೆ.

ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಹಿಂದಿನ ಸಾಲಿನಲ್ಲಿ ಅನುಮೋದಿಸಲಾದ ಕಾಮಗಾರಿಗಳನ್ನು ಮೊದಲಿಗೆ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ.

ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಅಸ್ತು
2019-20ರ ಬಾಕಿ ಕಾಮಗಾರಿಗಳನ್ನು 2 ಕೋಟಿ ರೂ. ವರೆಗೆ ಮಂದುವರಿಸುವ ಪ್ರಸ್ತಾವನೆ ಸಂಬಂಧ ಈಗಾಗಲೇ ಪ್ರಾರಂಭವಾಗಿರುವ ಮತ್ತು ಮುಂದುವರಿದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳ ಮತ್ತು ಉಪ ವಿಭಾಗಾಧಿಕಾರಿಗಳ ಪಿಡಿ ಖಾತೆಯಲ್ಲಿರುವ ಅನುದಾನದಲ್ಲಿ ವೆಚ್ಚ ಮಾಡಲು ಈಗಾಗಲೇ ಆಡಳಿತ ಇಲಾಖೆಗೆ ತಿಳಿಸಲಾಗಿದೆ.2020-21ನೇ ಸಾಲಿನಲ್ಲಿ ಪ್ರತಿ ಶಾಸಕರಿಗೆ ತಲಾ 1 ಕೋಟಿ ರೂ.ನಂತೆ ರೂಪಿಸಲಾದ ಕ್ರಿಯಾಯೋಜನೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಆರ್ಥಿಕ ಇಲಾಖೆ ತಿಳಿಸಿದೆ.

ABOUT THE AUTHOR

...view details