ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪರಾದ ಪ್ರಕರಣಗಳು ನಡೆಯೋದೇನು ಹೊಸತಲ್ಲ. ಆದರೆ. ಈ ಪ್ರಕರಣ ಮಾತ್ರ ಭಿನ್ನವಾಗಿದೆ. ಸಿನಿಮಾ ಶೈಲಿಯಲ್ಲಿ ರಾಬರಿ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.
ಸಂಪಿಗೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಟುಂಬವೊಂದು ವಾಸವಿದ್ದು, ತಮ್ಮ ಮಗನಿಗೆ ಮದುವೆ ನಿಶ್ಚಯವಾದ ಸಂಭ್ರಮದಲ್ಲಿದ್ರು. ಆದ್ರೆ ಖತಾರ್ನಾಕ್ ಗ್ಯಾಂಗ್ ಆ ಮನೆಗೆ ಸ್ಕೇಚ್ ಹಾಕಿ ದೊಚಿದ್ದಾರೆ.
ಸಿಲಿಕಾನ್ ಸಿಟಿಲಿ ನಡೀತು ಫಿಲ್ಮೀ ಸ್ಟೈಲ್ ರಾಬರಿ ಸಂಪಿಗೆ ಹಳ್ಳಿ ಬಳಿಯ ಶಿವರಾಮಕಾರಂತ ಲೇಔಟ್ ನಿವಾಸಿ ಉಮಾ ಎಂಬವರ ಮಗ ಆನಂದ್ಗೆ ಮದುವೆ ನಿಶ್ಚಯವಾಗಿತ್ತು. ಆದರೆ ಕಳೆದ ಭಾನುವಾರ ತಡರಾತ್ರಿ ಮನೆಗೆ ಎಂಟ್ರಿ ಕೊಟ್ಟಿರೋ ಕಳ್ಳರ ಗ್ಯಾಂಗ್ ಮನೆಯ ರೂಂನಲ್ಲಿ ಮಲಗಿದ್ದ ಉಮಾ ಹಾಗೂ ಅವರ ತಾಯಿಯ ಕತ್ತಿನ ಬಳಿ ಚಾಕು ಇರಿಸಿ,ಮನೆಯಲ್ಲಿದ್ದ ಸುಮಾರು 13 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ.
ಸದ್ಯ ಪ್ರಕರಣ ಕೈಗೆತ್ತಿಕೊಂಡಿರುವ ಸಂಪಿಗೆಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.