ಕರ್ನಾಟಕ

karnataka

ETV Bharat / city

ಚಿತ್ರಮಂದಿರಗಳಲ್ಲಿ 100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿ: ಸಿಎಂಗೆ ಫಿಲ್ಮ್ ಚೇಂಬರ್ ಮನವಿ

ಕೋವಿಡ್​ ಮೂರನೇ ಅಲೆ ಹಿನ್ನೆಲೆ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇಕಡಾ 50ರಷ್ಟು ಭರ್ತಿಗೆ ಅವಕಾಶ ನೀಡಿತ್ತು. ಆದರೆ ಇದರಿಂದ ಚಿತ್ರಮಂದಿರ ಮಾಲೀಕರು ಮತ್ತು ನಿರ್ಮಾಪಕರಿಗೆ ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶೇಕಡಾ 100ರಷ್ಟು ಭರ್ತಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿತು.

By

Published : Jul 24, 2021, 5:10 PM IST

film-chamber-appeals-to-cm-to-allow-100-percent-audience-in-theaters
ಸಿಎಂಗೆ ಫಿಲ್ಮ್ ಚೇಂಬರ್ ಮನವಿ

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಸೀಟು ಭರ್ತಿ ಹಾಗೂ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ಕೊಡಬೇಕು ಎಂದು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪಗೆ ಮನವಿ ಮಾಡಿದೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಬೆಳಗ್ಗೆ ಸಿಎಂ ಅವರನ್ನು ಭೇಟಿ ಮಾಡಿದ್ದ ನಿಯೋಗ, ಚಿತ್ರರಂಗದ ಸದ್ಯದ ಪರಿಸ್ಥಿತಿಯ ಕುರಿತು ವಿವರಿಸಿತು. ಶೇಕಡಾ 50ರಷ್ಟು ಸೀಟು ಭರ್ತಿಯೊಂದಿಗೆ ಚಿತ್ರಮಂದಿರ ತೆರೆಯಿರಿ ಅಂದರೆ ಅದು ಅಷ್ಟು ಸುಲಭವಲ್ಲ. ಇದರಿಂದ ಥಿಯೇಟರ್ ನಿರ್ವಹಣೆಯ ಖರ್ಚು ಕೂಡ ಬರುವುದು ಕಷ್ಟ. ಹಾಗಾಗಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿ ಕೊಟ್ಟರೆ, ಚಿತ್ರಮಂದಿರದ ಮಾಲೀಕರು ಬದುಕುತ್ತಾರೆ. ಸಿನಿಮಾ ನಿರ್ಮಾಪಕರು ಉಳಿಯುತ್ತಾರೆ ಎಂದು ಮನವಿ ಮಾಡಿದೆ.

ಈ ಕರಿತು ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ಮುಂದಿನ ಎರಡು ಮೂರು ದಿನಗಳಲ್ಲಿ ಸರ್ಕಾರ ಚಿತ್ರಮಂದಿರಗಳಲ್ಲಿ 100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡುವ ಭರವಸೆ ಇದೆ ಎಂದು ಹೇಳಿದ್ದಾರೆ.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ಕಾರ್ಯದರ್ಶಿ ಎನ್.ಎಂ. ಸುರೇಶ್‌ ಹಾಗೂ ಊಪಾಧ್ಯಕ್ಷ ಉಮೇಶ್‌ ಉಣಕಾರ್‌, ಚಿತ್ರೋದ್ಯಮದ ಪರವಾಗಿ ಮನವಿ ಪತ್ರ ನೀಡಿದರು.

ABOUT THE AUTHOR

...view details