ಬೆಂಗಳೂರು: ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಹೋಳಿ ಹಬ್ಬ ಆಚರಣೆ ಏರ್ಪಡಿಸಿದ ವೇಳೆ ಶ್ರೀಮಂತ ಮಕ್ಕಳ ಕಾರು ಡಿಕ್ಕಿಯಾಗಿ ಹೊಡೆದಾಡಿಕೊಂಡ ಪ್ರಕರಣ ಸಂಬಂಧ ವಿಡಿಯೋ ವೈರಲ್ ಆಗಿದೆ.
ಹೋಳಿ ಸಂಭ್ರಮಾಚರಣೆ ವೇಳೆ ಶ್ರೀಮಂತರ ಮಕ್ಕಳ ಹೊಡೆದಾಟ ಪ್ರಕರಣ: ವಿಡಿಯೋ ವೈರಲ್ - ಮಕ್ಕಳ ಕಾರು ಡಿಕ್ಕಿಯಾಗಿ ಹೊಡೆದಾಡಿಕೊಂಡ ಪ್ರಕರಣ
ಕಾರಿಗೆ ಡಿಕ್ಕಿಯಾಗಿದ್ದಕ್ಕೆ ನಾನು ಪ್ರತಿಷ್ಠಿತ ರಾಜಕಾರಣಿ ಸಂಬಂಧಿಕ ಎಂದು ಹೇಳಿಕೊಳ್ಳುವ ಯುವಕನೊಬ್ಬನನ್ನು ಕಾರಿನಿಂದ ಕೆಳಗಿಳಿಸಿ ಮನಬಂದಂತೆ ಥಳಿಸಲಾಗಿದೆ.
![ಹೋಳಿ ಸಂಭ್ರಮಾಚರಣೆ ವೇಳೆ ಶ್ರೀಮಂತರ ಮಕ್ಕಳ ಹೊಡೆದಾಟ ಪ್ರಕರಣ: ವಿಡಿಯೋ ವೈರಲ್ fighting-in-holi-celebration-time](https://etvbharatimages.akamaized.net/etvbharat/prod-images/768-512-6381127-thumbnail-3x2-ja.jpg)
ಗಲಾಟೆ ಮಾಡಿಕೊಂಡ ಯುವಕರು
ಹೊಡೆದಾಡಿಕೊಂಡ ವಿಡಿಯೋ ವೈರಲ್
ಹೋಳಿ ಹಬ್ಬ ಆಚರಣೆ ಸಲುವಾಗಿ ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳ ಮಕ್ಕಳು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ನೌಕರರು ಹೋಟೆಲ್ನಲ್ಲಿ ಸೇರಿದ್ದರು. ಸಂಭ್ರಮ ಮುಗಿದ ನಂತರ ಹೊರ ಬರುವಾಗ ಮಹೀಂದ್ರ ಎಕ್ಸ್ ಯು ವಿ, ಹಾಗೋ ಪೋಲೊ ಜಿಟಿಎಸ್ ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿತ್ತು.
ಈ ವೇಳೆ ಪೋಲೊ ಜಿಟಿಎಸ್ ಓಡಿಸುತ್ತಿದ್ದ ಚಾಲಕ ನಾನು ಪ್ರತಿಷ್ಠಿತ ರಾಜಕಾರಣಿ ಸಂಬಂಧಿ ಎಂದು ಮಹಿಂದ್ರ ಕಾರ್ನಲ್ಲಿದ್ದ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ. ವಿಚಾರ ತಿಳಿದು ಹೈಗ್ರೌಂಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನ ಬಂಧಿಸಿದ್ದಾರೆ.
Last Updated : Mar 12, 2020, 3:34 PM IST