ಆನೇಕಲ್: ಬನ್ನೇರುಘಟ್ಟ ಬಯೋಲಾಜಿಕಲ್ ಸಫಾರಿಯಲ್ಲಿ ಕಾಡಿನ ಹುಲಿ ಹಾಗು ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದ್ದು, ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಕಾಡಿನ ಹುಲಿ - ಸಫಾರಿ ಹುಲಿ ನಡುವಿನ ಕಾದಾಟ...! ವಿಡಿಯೋ ವೈರಲ್... - ವಿಡಿಯೋ ವೈರಲ್
ಬನ್ನೇರುಘಟ್ಟ ಬಯೋಲಾಜಿಕಲ್ ಸಫಾರಿಯಲ್ಲಿ ಕಾಡಿನ ಹುಲಿ ಹಾಗು ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದ್ದು, ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.
ಹೌದು, ಕಾಡಿನ ಹುಲಿ ಹಾಗು ಸಫಾರಿ ಹುಲಿಯ ನಡುವೆ ಕಾದಾಟ ನಡೆದಿರುವುದನ್ನು ಪ್ರಾಣಿ ಪ್ರಿಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ಇದನ್ನು ಅಧಿಕೃತವಾಗಿ ಕರ್ನಾಟಕ ಅರಣ್ಯ ಇಲಾಖೆ ಪೇಜ್ನಲ್ಲಿ ಪ್ರಕಟ ಮಾಡಲಾಗಿದೆ. ಎರಡು ಹುಲಿಗಳ ನಡುವಿನ ಫೈಟ್ ಸಫಾರಿ ಪ್ರಿಯರಿಗೆ ಮನರಂಜನೆ ನೀಡಿದ್ದು, ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಸಂಚಾರ ಮಾಡಿಕೊಂಡಿದ್ದ ಕಾಡಿನ ಹುಲಿ ಆಗಾಗ ಸಫಾರಿಯಲ್ಲಿನ ಹುಲಿಗಳ ಜಾಗದ ಬಳಿ ಕಾಣಿಸಿಕೊಂಡು ಕಾದಾಟ ನಡೆಸುತ್ತಲೇ ಇದೆ ಎನ್ನಲಾಗಿದೆ.
ಇನ್ನು ಬನ್ನೇರುಘಟ್ಟ ವ್ಯಾಪ್ತಿಯ ಕಾಡಿನ ಹುಲಿ ಸಫಾರಿ ಹುಲಿಗಳ ಮೇಲೆ ಮುಗಿ ಬೀಳಲು ಹೊಂಚು ಹಾಕುತ್ತಿದೆ ಎನ್ನಲಾಗುತ್ತಿದ್ದು, ಅರಣ್ಯ ಇಲಾಖೆ ಸಫಾರಿಯ ಸುತ್ತ ಬೇಲಿ ಹಾಕದೇ ಇರುವುದೇ ಕಾರಣ ಎಂದು ಜನರು ಟೀಕಿಸಿದ್ದಾರೆ.