ಬೆಂಗಳೂರು:ನಗರದಲ್ಲಿ ಕೋವಿಡ್ ಹರಡುವಿಕೆ ಮಿತಿಮೀರುತ್ತಿರುವ ಹಿನ್ನೆಲೆ, ಕಲಾಸಿಪಾಳ್ಯ, ಕೆ.ಆರ್.ಮಾರ್ಕೆಟ್ ಸೀಲ್ಡೌನ್ ಮಾಡುವುದರ ಜೊತೆಗೆ ಹದಿನೈದು ರಸ್ತೆಗಳನ್ನೂ ಸೀಲ್ಡೌನ್ ಮಾಡಲಾಗಿದೆ.
ಟೌನ್ಹಾಲ್ ಸರ್ಕಲ್ ಸೇರಿದಂತೆ ಬೆಂಗಳೂರಿನ ಹದಿನೈದು ಪ್ರಮುಖ ರಸ್ತೆಗಳು ಸೀಲ್ಡೌನ್
ಬೆಂಗಳೂರು ನಗರದಲ್ಲಿ ಕೋವಿಡ್ ಹರಡುವಿಕೆ ಮಿತಿಮೀರುತ್ತಿರುವ ಹಿನ್ನೆಲೆ, ಕಲಾಸಿಪಾಳ್ಯ, ಕೆ.ಆರ್.ಮಾರ್ಕೆಟ್ ಸೀಲ್ಡೌನ್ ಮಾಡುವುದರ ಜೊತೆಗೆ ಕೊರೊನಾ ಸೋಂಕು ಹೆಚ್ಚಾಗಿ ಕಂಡುಬಂದ ಹಾಗೂ ಜನ ಸಂಚಾರ ಹೆಚ್ಚಾಗಿರುವ ಹದಿನೈದು ರಸ್ತೆಗಳನ್ನೂ ಸೀಲ್ಡೌನ್ ಮಾಡಲಾಗಿದೆ.
ಟೌನ್ಹಾಲ್ ಸರ್ಕಲ್ ಸೇರಿದಂತೆ ಬೆಂಗಳೂರಿನ ಹದಿನೈದು ಪ್ರಮುಖ ರಸ್ತೆಗಳು ಸೀಲ್ಡೌನ್
ಈ ರಸ್ತೆಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡುಬಂದ ಹಾಗೂ ಜನ ಸಂಚಾರ ಹೆಚ್ಚಾಗಿರುವ ಹಿನ್ನೆಲೆ ಸೀಲ್ಡೌನ್ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಸೂಚನೆ ನೀಡಿದ್ದಾರೆ.
ಸೀಲ್ಡೌನ್ ಮಾಡಿರುವ ರಸ್ತೆಗಳು: ಟೌನ್ ಹಾಲ್ ಸರ್ಕಲ್, ಜೆಸಿ ರಸ್ತೆ, ಎ.ಎಂ.ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ, ಕೃಷ್ಣರಾಜೇಂದ್ರ ಮಾರುಕಟ್ಟೆ ಜಂಕ್ಷನ್ ಮತ್ತು ಸರ್ವಿಸ್ ರಸ್ತೆ ಟಗರುಪೇಟೆ ರಸ್ತೆ, ಟಿಪ್ಪುಸುಲ್ತಾನ್ ಪ್ಯಾಲೇಸ್ ರಸ್ತೆ, ಭಾಷ್ಯಂ ರಸ್ತೆ, ಶ್ರೀನಿವಾಸ ಮಂದಿರ ರಸ್ತ, ಕಿಲರಿ ರಸ್ತೆ, ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಸನಕಲಪೇಟೆ ರಸ್ತೆ ಹಾಗೂ ಎಸ್ ಜೆ ಪಿ ರಸ್ತೆ ಈ ರಸ್ತೆಗಳಲ್ಲಿನ ಎಲ್ಲಾ ರೀತಿಯ ವಹಿವಾಟು ನಡೆಸುವ ಅಂಗಡಿಗಳು, ಹೋಟೆಲ್, ರೆಸ್ಟೋರೆಂಟ್, ಬೀದಿಬದಿ ವ್ಯಾಪಾರ, ಧಾರ್ಮಿಕ ಕೇಂದ್ರಗಳು, ಮದ್ಯದಂಗಡಿ, ಹೂ ಮಾರುಕಟ್ಟೆಗಳನ್ನ ಬಂದ್ ಮಾಡಲು ಸೂಚಿಸಲಾಗಿದೆ.
ಇನ್ನು, ಹಣ್ಣು-ತರಕಾರಿ ಮತ್ತು ಮಾಂಸ ಮಾರಾಟ, ಆಸ್ಪತ್ರೆ, ಮೆಡಿಕಲ್, ದಿನಪತ್ರಿಕೆ, ಹಾಲು, ಅತ್ಯಾವಶ್ಯಕ ವಸ್ತುಗಳು ಸಿಗಲಿವೆ. ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಜನರ ಆರೋಗ್ಯ ಪರೀಕ್ಷೆ, ರ್ಯಾಂಡಮ್ ಪರೀಕ್ಷೆ, ಸೋಂಕಿತರ ಪ್ರಥಮ-ದ್ವಿತೀಯ ಸಂಪರ್ಕಿತರ ಪತ್ತೆಹಚ್ಚಲು ಹೆಚ್ಚು ಮುಂಜಾಗ್ರತೆವಹಿಸುವಂತೆ ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ.
ಕಸ ವಿಲೇವಾರಿ, ಸ್ವಚ್ಚತೆ, ನೀರು ಪೂರೈಕೆಗೂ ಹೆಚ್ಚಿನ ಕ್ರಮ ವಹಿಸಲು ಸೂಚಿಸಲಾಗಿದೆ.ಅಲ್ಲದೆ,ನಗರದಲ್ಲಿ ಕೋವಿಡ್ ಸಾವುಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಬಿಬಿಎಂಪಿಯಿಂದಲೇ ಎಂಟು ವಲಯಗಳಿಗೆ ತಲಾ ಎರಡು ಶ್ರದ್ಧಾಂಜಲಿ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ವಾಹನದಲ್ಲಿ ಇಬ್ಬರು ಸಿಬ್ಬಂದಿ ಹಾಗೂ ಪಿಪಿಇ ಕಿಟ್ ವ್ಯವಸ್ಥೆ ಮಾಡಲಾಗಿದೆ.