ಕರ್ನಾಟಕ

karnataka

ETV Bharat / city

ಹೂವುಗಳ ವ್ಯಾಪಾರವಿಲ್ಲದೆ ಕಂಗಾಲಾದ ರೈತರು ; ರಾಜಕಾಲುವೆಗೆ ಹೂವು ಎಸೆದು ಆಕ್ರೋಶ! - ಹೂವುಗಳ ವ್ಯಾಪಾರವಿಲ್ಲದೆ ಕಂಗಾಲಾದ ರೈತರು

ಒಂದೆಡೆ ನಾವು ಬೆಳೆದ ಹೂವಿಗೆ ಸರಿಯಾದ ಬೆಲೆ ಸಿಗ್ತಿಲ್ಲ ಅಂತ, ಚೀಲ ಚೀಲ ಹೂವನ್ನು ರಾಜಕಾಲುವೆಗೆ ಸುರಿದು ರೈತರು ಅಳಲು ತೋಡಿಕೊಂಡಿದ್ದಾರೆ..

Farmers threw flowers
ರೈತರು

By

Published : May 19, 2021, 12:41 PM IST

ಬೆಂಗಳೂರು :ಏಪ್ರಿಲ್, ಮೇ ತಿಂಗಳು ಬಂತು‌ ಅಂದ್ರೆ ಮದುವೆ ಸೀಸನ್ ಅಥವಾ ಇನ್ನಿತರೇ ಕಾರ್ಯಕ್ರಮಗಳು ಆರಂಭವಾಗುತ್ತೆ. ಅಲ್ಲಿ ಅಲಂಕಾರಕ್ಕೆ ಅತಿ ಹೆಚ್ಚು ಹೂವುಗಳ‌ ಬಳಕೆಯಾಗುತ್ತೆ. ಆದ್ರೆ, ಲಾಕ್​ಡೌನ್​ ಇವೆಲ್ಲಕ್ಕೂ ಕೊಳ್ಳಿ ಇಟ್ಟಿದೆ.

ರಾಜಕಾಲುವೆಗೆ ಹೂವು ಎಸೆದು ಆಕ್ರೋಶ..

ಲಾಕ್‌ಡೌನ್ ಹಿನ್ನೆಲೆ ಮದುವೆ ಸಮಾರಂಭಗಳು ತೀರಾ ಸರಳವಾಗಿ ನಡೆಯುತ್ತಿರುವ ಕಾರಣ ಹೂವುಗಳ ವ್ಯಾಪಾರವಾಗುತ್ತಿಲ್ಲ.‌ ಹೀಗಾಗಿ‌, ವ್ಯಾಪಾರವಿಲ್ಲದ ಕಾರಣ ರಾಜ ಕಾಲುವೆಗೆ ಹೂವು ಸುರಿದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಹೂವಿನ ವ್ಯಾಪಾರಕ್ಕೆ ಬೆಳಗ್ಗೆ 5 ರಿಂದ 7 ಗಂಟೆಯವರೆಗೆ ಅವಕಾಶ ನೀಡಲಾಗಿದೆ. 7 ಗಂಟೆಯಾಗುತ್ತಿದ್ದಂತೆ ಹೊಯ್ಸಳದಲ್ಲಿ ಸ್ಥಳಕ್ಕೆ ಬಂದು ಪೊಲೀಸರು ಸ್ಥಳದಿಂದ ಹೊರಡುವಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಒಂದೆಡೆ ನಾವು ಬೆಳೆದ ಹೂವಿಗೆ ಸರಿಯಾದ ಬೆಲೆ ಸಿಗ್ತಿಲ್ಲ ಅಂತ, ಚೀಲ ಚೀಲ ಹೂವನ್ನು ರಾಜಕಾಲುವೆಗೆ ಸುರಿದು ರೈತರು ಅಳಲು ತೋಡಿಕೊಂಡಿದ್ದಾರೆ.

ಮತ್ತೊಂದೆಡೆ ನಾವು ಕಡಿಮೆ ಬೆಲೆಗೆ ಕೇಳಿದ್ರೆ ರೈತರು ಹೂವು ನೀಡ್ತಿಲ್ಲ. ಆದರೆ, ಕಾಲುವೆಗೆ ಹೂವು ಸುರಿದು ಹೋಗ್ತಿದ್ದಾರೆ ಅಂತ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details