ಕರ್ನಾಟಕ

karnataka

ETV Bharat / city

ರಸ್ತೆಮೇಲೆ ಅರೆಬೆತ್ತಲೆಯಾಗಿ ಮಲಗಿ ರೈತರ ಪ್ರತಿಭಟನೆ - ಭಾರತ್​ ಬಂದ್

ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದು, ವಿಧಾನಸೌಧದ ಕಡೆಗೆ ನುಗ್ಗಲು ಹೊರಟ ರೈತರನ್ನು ಪೊಲೀಸರು ತಡೆದರು.

Farmers protesting lying on the road
ಅರೆಬೆತ್ತಲೆಯಾಗಿ ರಸ್ತೆ ಮೇಲೆ ಮಲಗಿ ಪ್ರತಿಭಟಿಸಿದ ರೈತರು

By

Published : Dec 8, 2020, 12:40 PM IST

ಬೆಂಗಳೂರು:ವಿಧಾನಸೌಧದ ಕಡೆಗೆ ನುಗ್ಗಲು ಹೊರಟ ರೈತರನ್ನು ಪೊಲೀಸರು ತಡೆದಾಗ ರೈತರು ಅರೆಬೆತ್ತಲೆಯಾಗಿ ರಸ್ತೆ ಮೇಲೆ ಮಲಗಿ ಪ್ರತಿಭಟಿಸಿದರು.

ಅರೆಬೆತ್ತಲೆಯಾಗಿ ರಸ್ತೆ ಮೇಲೆ ಮಲಗಿ ಪ್ರತಿಭಟಿಸಿದ ರೈತರು

ನಗರದ ಮೌರ್ಯ ಸರ್ಕಲ್​ನಿಂದ, ಮೈಸೂರು ಬ್ಯಾಂಕ್ ಸರ್ಕಲ್ ಕಡೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಈ ವೇಳೆ ವಿಧಾನಸೌಧದ ಕಡೆಗೆ ನುಗ್ಗಲು ಹೊರಟ ರೈತರನ್ನು ಪೊಲೀಸರು ತಡೆದರು. ಇದರಿಂದ ಆಕ್ರೋಶಗೊಂಡ ರೈತರು, ಅರೆಬೆತ್ತಲೆಯಾಗಿ ರಸ್ತೆ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆದಿದ್ದು, ರೈತರೊಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದರು. ಬಳಿಕ ಅವರು ಚೇತರಿಸಿಕೊಂಡಿದ್ದು, ಮತ್ತೆ ರ್ಯಾಲಿ ಮೈಸೂರು ಬ್ಯಾಂಕ್ ಸರ್ಕಲ್​ನತ್ತ ಹೊರಟಿತು.

ಓದಿ:ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಿದೆ: ಸಚಿವ ಆರ್.ಅಶೋಕ್

ಪ್ರತಿಭಟನೆಯಲ್ಲಿ ಐಕ್ಯ ಹೋರಾಟ ಸಮಿತಿ, ಮನೋಹರ್ ನೇತೃತ್ವದಲ್ಲಿ ಯೂಥ್ ಕಾಂಗ್ರೆಸ್, ಜೆಡಿಎಸ್ ನಗರ ಅಧ್ಯಕ್ಷ ಆರ್.ಪ್ರಕಾಶ್ ನೇತೃತ್ವದ ಕಾರ್ಯಕರ್ತರು, ಬೀದಿಬದಿ ವ್ಯಾಪಾರಿಗಳು, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದಾರೆ.

ABOUT THE AUTHOR

...view details