ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಸಮಸ್ಯೆ ಮುಂದುವರೆದಿದೆ. ಇದೀಗ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಕಾರಣ ಕೋವಿಡ್ ರೋಗಿಯ ಕುಟುಂಬದವರು ಸೋಂಕಿತನನ್ನು ಸಿಎಂ ಯಡಿಯೂರಪ್ಪರ ನಿವಾಸದ ಬಳಿಯೇ ಕರೆತಂದಿರುವ ಘಟನೆ ನಡೆದಿದೆ.
ಆಟೋದಲ್ಲಿ ಸೋಂಕಿತನನ್ನು ಸಿಎಂ ನಿವಾಸದ ಮುಂದೆ ಕರೆತರಲಾಗಿದ್ದು, ಆಟೋ ನಿಲ್ಲಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಸಿಎಂ ನಿವಾಸದ ರಸ್ತೆಯಲ್ಲಿ ಬಿಗಿ ಭದ್ರತೆ ನಡುವೆಯೂ ರೋಗಿಯ ಕುಟುಂಬಸ್ಥರು ಸೋಂಕಿತನನ್ನು ಕರೆತಂದಿದ್ದರು. ಬಳಿಕ ಆತನನ್ನು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.