ಕರ್ನಾಟಕ

karnataka

ETV Bharat / city

ಲಾಕ್​ಡೌನ್​​ನಿಂದಾಗಿ ಕೌಟುಂಬಿಕ ಸಮಸ್ಯೆ: ಮಹಿಳಾ ಸಹಾಯವಾಣಿ ಹೇಳೋದೇನು? - ಲಾಕ್​ಡೌನ್​

ಕೋವಿಡ್-19 ಬೆಳಕಿಗೆ ಬಂದ ನಂತರ ವನಿತಾ ಸಹಾಯವಾಣಿಯಲ್ಲಿ ಸುಮಾರು 620 ಪ್ರಕರಣಗಳು ದಾಖಲಾಗಿದ್ದು, ಸಂತ್ರಸ್ತರಿಗೆ ವನಿತಾ ಸಹಾಯವಾಣಿಯವರು ಪೊಲೀಸರ ಜೊತೆ ಕೈ ಜೊಡಿಸಿ ಕೌನ್ಸೆಲಿಂಗ್ ನಡೆಸುತ್ತಿದ್ದಾರೆ.

rani shetty
ರಾಣಿ ಶೆಟ್ಟಿ‌

By

Published : May 6, 2020, 6:14 PM IST

ಬೆಂಗಳೂರು:ಕೊರೊನಾ ಮಹಾಮಾರಿಯಿಂದಾಗಿ ಸಂಕಷ್ಟ ಶುರುವಾಗಿದೆ. ಕೊರೊನಾ ಹರಡದಂತೆ ತಡೆಯಲು ಲಾಕ್​ಡೌನ್​ ಹೇರಲಾಗಿದ್ದು, ಈ ಅವಧಿಯಲ್ಲಿ ಬಹುತೇಕ ಮಂದಿ ಮನೆಯಲ್ಲಿದ್ದು, ಕುಟುಂಬದವರೊಂದಿಗೆ ಬೆರೆಯಲು ಬಳಸಿಕೊಂಡರೆ, ಇನ್ನೂ ಕೆಲವರು ಕೌಟುಂಬಿಕ ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ನೆಮ್ಮದಿ ಕಳೆದುಕೊಂಡಿದ್ದಾರೆ.

ಇಂತಹ ಕೌಟುಂಬಿಕ ಕಲಹಗಳನ್ನ ತಡೆಗಟ್ಟಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಬಹಳಷ್ಟು ಮುಂಜಾಗ್ರತಾ, ಕ್ರಮಗಳನ್ನು ಕೈಗೊಂಡಿದೆ. ಆದರೂ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕೌಟುಂಬಿಕ ಪರಿಹಾರ, ವನಿತಾ ಸಹಾಯವಾಣಿಗೆ ಇಲ್ಲಿಯವರೆಗೆ ಒಟ್ಟು 620 ಕರೆಗಳು ಬಂದಿದ್ದು, ಇದರಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸುಮಾರು 193 ಪ್ರಕರಣಗಳು ದಾಖಲಾಗಿವೆ.

ರಾಣಿ ಶೆಟ್ಟಿ‌
ಫೆಬ್ರವರಿಯಿಂದ ಇಲ್ಲಿಯವರೆಗೆ ಪುರುಷರು ಮನೆಯಲ್ಲಿರುವ ಕಾರಣ ಮಹಿಳೆಯರ ಜೊತೆ ವಿನಾಕಾರಣ ಗಲಾಟೆ ಮಾಡೋದು, ಲೈಂಗಿಕ ಸುಖಕ್ಕೆ ಸಹಕಾರ ನಿಡುವಂತೆ ಒತ್ತಾಯ ಮಾಡೋದು, ಒಂದು ವೇಳೆ ಒಪ್ಪದಿದ್ದಾಗ ಹಿಂಸೆ ನೀಡುವುದು, ಹೀಗೆ ನಾನಾ ರೀತಿಯ ಸುಮಾರು 193 ಪ್ರಕರಣಗಳು ದಾಖಲಾಗಿದೆ ಅನ್ನೋ ವಿಚಾರ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಕೋವಿಡ್-19 ಬೆಳಕಿಗೆ ಬಂದ ನಂತರ ವನಿತಾ ಸಹಾಯವಾಣಿಯಲ್ಲಿ ಸುಮಾರು 620 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಅತಿ ಹೆಚ್ಚು ಕೌಟುಂಬಿಕ ಪ್ರಕರಣಗಳ ಸಂಖ್ಯೆ ಇದೆ.....
ಸಂತ್ರಸ್ತರಿಗೆ ವನಿತಾ ಸಹಾಯವಾಣಿಯವರು ಪೊಲೀಸರ ಜೊತೆ ಕೈ ಜೊಡಿಸಿ ಕೌನ್ಸೆಲಿಂಗ್ ನಡೆಸುತ್ತಿದ್ದಾರೆ. ಇನ್ನು ಕೌನ್ಸೆಲಿಂಗ್ ನಡೆಸಲು ವನಿತಾ ಸಹಾಯಣಿಯಲ್ಲಿ 8 ಜನ ಆಪ್ತ ಸಮಾಲೋಚಕಿಯರು ಇದ್ದು, ಇವರ ಜೊತೆ ಓರ್ವ ಮಹಿಳಾ ಡಿಸಿಪಿ, ಮಹಿಳಾ ಪೇದೆ ಇದ್ದು, ಪ್ರತಿಯೊಬ್ಬರೂ ಮಹಿಳೆಯರ ದೌರ್ಜನ್ಯ, ಕುಟುಂಬ ಕಲಹದ ವಿಚಾರಕ್ಕೆ ರೆಸ್ಪಾನ್ಸ್ ಮಾಡ್ತಿದ್ದಾರೆ. ಇವುಗಳಿಗೆ ಉದಾಹರಣೆ ನೀಡುವುದಾದರೆ..
1. ಲಾಕೌಡೌನ್ ಹೇರಿದ ನಂತ್ರ ಬಹುತೇಕ ಮಂದಿ‌ ಐಟಿ ಉದ್ಯೋಗಿಗಳು ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಕೆಲಸ ‌ನಿರ್ವಹಿಸುತ್ತಿದ್ದ ಓರ್ವ ಯುವತಿ‌ ಲಾಕ್​ಡೌನ್​ ವೇಳೆ ಮನೆಗೆ ತೆರಳಿದಾಗ ಮನೆಯಲ್ಲಿ ತನ್ನ ಒಡಹುಟ್ಟಿದ ಅಣ್ಣ ಹಿಂಸೆ ನೀಡುತ್ತಿದ್ದ ಎಂದು ಕರೆ ಮಾಡಿದ್ದಳು. ತಕ್ಷಣ ಫೋನ್​ ಮೂಲಕ ಕೌನ್ಸೆಲಿಂಗ್​ ಮಾಡಿ ವನಿತಾ ಸಹಾಯವಾಣಿ ತಂಡ ಅಣ್ಣ, ತಂಗಿಯನ್ನು ಒಂದು ಮಾಡುವಲ್ಲಿ ಸಫಲವಾಗಿತ್ತು.


2.ಮತ್ತೊಂದೆಡೆ ಲಾಕ್​ಡೌನ್​​​ ಸಂದರ್ಭದಲ್ಲಿ ಗಂಡ, ಹೆಂಡತಿ‌ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾದಾಗ, ‌ಪ್ರತಿ ದಿನ ಗಂಡ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವಂತೆ ಪತ್ನಿಗೆ ಹಿಂಸೆ ನೀಡುತ್ತಿದ್ದಾನೆ ಎಂದು ಮಹಿಳೆ ಕರೆ ಮಾಡಿದ್ದಳು.

3. ಮತ್ತೊಂದೆಡೆ ಕೊರೊನಾ ಸೋಂಕು ಸಿಲಿಕಾನ್ ಸಿಟಿಗೆ ವಕ್ಕರಿಸುವ ಮೊದಲೇ ಮದುವೆಯಾಗಿ ಗಂಡನ ಮನೆಗೆ ಹೋದಾಗ ಅತ್ತೆ, ಮಾವ, ಗಂಡ ವರದಕ್ಷಿಣೆಗೆ ಪೀಡಿಸಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಇಂತಹ ಸುಮಾರು 193 ಪ್ರಕರಣಗಳು ದಾಖಲಾಗಿದೆ.

ಈ ಕುರಿತು ಮಾತನಾಡಿರುವ ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ‌, ಲಾಕ್​​​ಡೌನ್ ಆದ ನಂತರ ಮಹಿಳೆಯರ ಮೇಲಿನ ದೌರ್ಜನ್ಯ, ಕುಟುಂಬದಲ್ಲಿ ತೊಂದರೆ ಜಾಸ್ತಿಯಾಗಿದ್ದು, ನಗರ ಆಯುಕ್ತರ ಕಚೇರಿಯಲ್ಲಿರುವ ನಮಗೆ ಕರೆಗಳು ಬಹಳಷ್ಟು ಬಂದಿದೆ. ಹೀಗಾಗಿ ಮುಂಜಾನೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಮಸ್ಯೆಗಳನ್ನ ನಾವು ಕೇಳ್ತಿವಿ. ಲಾಕ್​​ಡೌನ್​ ಮೊದಲು ಕುಡಿದು ಗಲಾಟೆ ಮಾಡುವ ಪ್ರಕರಣ ಜಾಸ್ತಿ ಬರುತ್ತಿತ್ತು. ಈಗ ಮತ್ತೆ ಮದ್ಯ ಮಾರಾಟ ಪ್ರಾರಂಭವಾಗಿದೆ. ಮತ್ತೆ ಇಂತಹ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ.

ABOUT THE AUTHOR

...view details