ಬೆಂಗಳೂರು:ಸಂಚಾರಿ ನಿಯಮ ಉಲ್ಲಂಘಿಸಿದಾಗ ಟ್ರಾಫಿಕ್ ಪೊಲೀಸರು ದಂಡ ವಿಧಿಸುವುದು ಸಹಜ. ಆದರೆ ಟ್ರಾಫಿಕ್ ನಿಯಮ ಉಲ್ಲಂಘಿಸದೆ, ಬೈಕ್ ಓಡಿಸದೆ ಪೊಲೀಸರು ಫೈನ್ ರಶೀದಿ ಮನೆಗೆ ಕಳಿಸಿಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು, ತಪ್ಪಿಲ್ಲದಿದ್ದರೂ ವಾಹನ ಮಾಲೀಕರಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ವಾಹನ ಮಾಲೀಕ ಕಾರ್ತಿಕ್ ಅಡಿಗ ಎಂಬುವರು ದಾಖಲೆ ಸಮೇತ ಸಂಚಾರಿ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ಬೈಕ್ ಸವಾರರೇ ಎಚ್ಚರ: ನೀವು ತಪ್ಪು ಮಾಡದಿದ್ದರೂ ನಿಮ್ಮ ವಾಹನಕ್ಕೆ ಬೀಳುತ್ತೆ ದಂಡ! - Bengaluru latest upodate news
ಬೆಂಳೂರಿನಲ್ಲಿ ನಕಲಿ ನಂಬರ್ ಪ್ಲೇಟ್ ಹಾವಳಿ ಹೆಚ್ಚಾಗಿದೆ. ಯಾರದ್ದೋ ಹೆಸರಿನಲ್ಲಿರುವ ನಂಬರ್ ಇನ್ಯಾವುದೋ ವಾಹನಕ್ಕೆ ಬಳಕೆಯಾಗುತ್ತಿದ್ದು, ಅಸಲಿ ಮಾಲೀಕರಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದಲ್ಲಿ ನಕಲಿ ನಂಬರ್ ಪ್ಲೇಟ್ ಹಾವಳಿ ಹೆಚ್ಚಾಗಿದೆ. ಯಾರದ್ದೋ ಹೆಸರಿನಲ್ಲಿರುವ ನಂಬರ್ ಇನ್ಯಾವುದೋ ವಾಹನಕ್ಕೆ ಬಳಕೆಯಾಗುತ್ತಿದೆ. ಬಜಾಜ್ ಡಿಸ್ಕವರ್ ಬೈಕ್ಗೆ ನೋಂದಣಿಯಾದ ಅದೇ ನಂಬರ್ ಅಪಾಚೆ ವಾಹನಕ್ಕಿದೆ. ಅಸಲಿ ಹಾಗೂ ನಕಲಿ ಬೈಕ್ ನಂಬರ್ ಇರುವ ಫೋಟೋವನ್ನು ಕಾರ್ತಿಕ್ ಅಡಿಗ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಆಂಧ್ರ ಪ್ರದೇಶದಲ್ಲಿದ್ದವರಿಗೂ ದಂಡ ಬಿದ್ದಿದೆ. ಎರಡು ವರ್ಷದಿಂದ ಜೀವನ್ ಎಂಬುವವರು ಆಂಧ್ರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಅವರ ಬೈಕ್ ಕೂಡ ಅವರ ಬಳಿಯಿದ್ದರೂ ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿದೆ ಎಂದು ದಂಡ ವಿಧಿಸಲಾಗಿದೆಯಂತೆ. ಹೀಗೆ ಕಳೆದ ಒಂದು ತಿಂಗಳಿನಲ್ಲಿ ನೂರಾರು ದೂರುಗಳು ಬರುತ್ತಿವೆ. ನಕಲಿ ನಂಬರ್ ಪ್ಲೇಟ್ ಬಳಸಿ ವಾಹನ ಬಳಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಾಹನ ಮಾಲೀಕರು ಆಗ್ರಹಿಸಿದ್ದಾರೆ.