ಕರ್ನಾಟಕ

karnataka

ETV Bharat / city

ನಕಲಿ ಹಾವಳಿಗೆ ಬ್ರೇಕ್ ಹಾಕಲು ನಂದಿನಿ ತುಪ್ಪದ ಪ್ಯಾಕಿಂಗ್ ವಿನ್ಯಾಸ ಬದಲಿಸಲು ಚಿಂತನೆ! - ಕೆಎಂಎಫ್ ನಂದಿನಿ ತುಪ್ಪದ ಪ್ಯಾಕಿಂಗ್ ಬದಲು

ವಿವಿಧ ಜಿಲ್ಲೆಗಳಲ್ಲಿ ನಕಲಿ ನಂದಿನಿ ತುಪ್ಪದ ಮಾರಾಟ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೆಎಂಎಫ್ ಹೊಸ ಪ್ಯಾಕಿಂಗ್ ಹಾಗೂ ಉತ್ಪನ್ನ ಟ್ರ್ಯಾಕಿಂಗ್ ತಂತ್ರಜ್ಞಾನ ಬಳಸಲು ಯೋಚಿಸಿದೆ.

ನಕಲಿ ನಂದಿನಿ ತುಪ್ಪ
ನಕಲಿ ನಂದಿನಿ ತುಪ್ಪ

By

Published : Feb 1, 2022, 12:03 AM IST

ಬೆಂಗಳೂರು:ನಕಲಿ ತುಪ್ಪದ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಕೆಎಂಎಫ್ ನಂದಿನಿ ತುಪ್ಪದ ಪ್ಯಾಕಿಂಗ್ ಮತ್ತು ಹೆಸರು ಬದಲಾಯಿಸಲು ಚಿಂತನೆ ನಡೆಸಿದೆ.

ವಿವಿಧ ಜಿಲ್ಲೆಗಳಲ್ಲಿ ನಕಲಿ ನಂದಿನಿ ತುಪ್ಪದ ಮಾರಾಟ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೆಎಂಎಫ್ ಹೊಸ ಪ್ಯಾಕಿಂಗ್ ಹಾಗೂ ಉತ್ಪನ್ನ ಟ್ರ್ಯಾಕಿಂಗ್ ತಂತ್ರಜ್ಞಾನ ಬಳಸಲು ಯೋಚಿಸಿದೆ. ಶೀಘ್ರದಲ್ಲೇ ನಂದಿನಿ ತುಪ್ಪದ ಪ್ಯಾಕಿಂಗ್ ವಿನ್ಯಾಸ ಹಾಗೂ ತುಪ್ಪದ ಹೆಸರನ್ನು ಬದಲಾಯಿಸಲು ಚಿಂತನೆ ನಡೆದಿದೆ. ಆ ಮೂಲಕ ನಕಲಿ ತುಪ್ಪದ ಅಕ್ರಮಕ್ಕೆ ತಡೆಯೊಡ್ಡಲು ಕೆಎಂಎಫ್ ಮುಂದಾಗಿದೆ.

ಹೊಸ ಪ್ಯಾಕಿಂಗ್​​ನಲ್ಲಿ ನಂದಿನಿ ತುಪ್ಪ ಉತ್ಪನ್ನಗಳ ಟ್ರ್ಯಾಕಿಂಗ್ ತಂತ್ರಜ್ಞಾನ ಬಳಸಲಾಗುವುದು ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ನಂದಿನಿ ಪ್ಯಾಕೇಜ್​​ಅನ್ನು ಟ್ಯಾಂಪರ್ ಮಾಡದ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಶೀರ್ಘದಲ್ಲೇ ನಂದಿನಿ ತುಪ್ಪ ಹೊಸ ರೂಪ, ಹೊಸ ಹೆಸರು ಹಾಗೂ ಸುರಕ್ಷತಾ ಕ್ರಮಗಳೊಂದಿಗೆ ಮಾರುಕಟ್ಟೆಗೆ ಬರಲಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details