ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದ್ದು, ಸಚಿವರಿಗೆ ಐದು ಸಾವಿರ ರೂ. ಹಣದ ಅವಶ್ಯಕತೆ ಇದೆ ಎಂದು ಬೇಡಿಕೆಯಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆಯಿಟ್ಟ ಖದೀಮರು - Suresh Kumar
ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದೆ.

ಸುರೇಶ್ ಕುಮಾರ್
ಮೆಸೆಂಜರ್ ಮೂಲಕ ಸಾಕಷ್ಟು ಜನರ ಬಳಿ ಐದು ಸಾವಿರ ರೂ. ಹಣ ಹಾಕಿ ಸಂಜೆ ಕೊಡುತ್ತೇನೆ. ಗೂಗಲ್ ಪೇ ಮಾಡಿ ಎಂದು ಖದೀಮರು ಸಂದೇಶ ಕಳುಹಿಸುತ್ತಾರೆ. ಇದನ್ನು ನಂಬಿ ಹಣ ಹಾಕಿದ್ರೆ ನೀವು ಮೋಸಕ್ಕೆ ಒಳಗಾಗುವುದು ಗ್ಯಾರಂಟಿ.
ಇನ್ನು ಈ ಕುರಿತು ಸಚಿವರ ಪರ್ಸನಲ್ ಸೆಕ್ರೆಟರಿ ಡಿಜಿ ಗೆ ದೂರು ನೀಡಿದ್ದು, ಸಿಐಡಿ ಸೈಬರ್ ಸೆಲ್ನಲ್ಲಿ ಎಫ್.ಐ.ಆರ್ ದಾಖಲಾಗಿದೆ.