ಬೆಂಗಳೂರು:ರಾಜ್ಯದ ಕರಾವಳಿ ಭಾಗದಲ್ಲಿ ಈಗಾಗಲೇ ವ್ಯಾಪಕವಾಗಿ ಮಳೆಯಾಗುತ್ತಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಹಲವೆಡೆ ಮಳೆಯಾಗಿದೆ. ಅದ್ರಲ್ಲೂ ಕೋಲಾರ ಮತ್ತು ಆಗುಂಬೆಯಲ್ಲಿ 2 ಸೆಂಮೀ, ಬಂಗಾರಪೇಟೆಯಲ್ಲಿ 4 ಸೆಂಮೀ, ಉತ್ತರ ಕನ್ನಡ ಜಿಲ್ಲೆಯಲ್ಲಿ 7 ಸೆಂಮೀ ಮಳೆಯಾಗಿದೆ.
ಬೆಂಗಳೂರು ಸೇರಿದಂತೆ ಒಳನಾಡು-ಕರಾವಳಿಯಲ್ಲಿ ಜೂನ್ 28ವರೆಗೆ ವ್ಯಾಪಕ ಮಳೆ ಸಾಧ್ಯತೆ - ಕರ್ನಾಟಕ ಇಂದಿನ ಹವಾಮಾನ ವರದಿ
ಪೂರ್ವ ಅರಬ್ಬಿ ಸಮುದ್ರದ ಕರಾವಳಿ ಭಾಗದಲ್ಲಿ ಕಡಿಮೆ ಒತ್ತಡ ವಿಸ್ತರಿಸಿರುವ ಪ್ರದೇಶ ಇರುವುದ್ರಿಂದ ಜೂನ್ 24-28ವರೆಗೆ ವ್ಯಪಕವಾಗಿ ಮಳೆಯಾಗಲಿದೆ. ಜೊತೆಗೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಜೂನ್ 24-26ವರೆಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ. 27 ಹಾಗೂ 28 ರಾಜ್ಯದ ಕೆಲವೆಡೆ ಮಳೆಯಾಗುವ ಸಾಧ್ಯೆತೆ ಇದೆ.
ಹವಾಮಾನ ವರದಿ
ಪೂರ್ವ ಅರಬ್ಬಿ ಸಮುದ್ರದ ಕರಾವಳಿ ಭಾಗದಲ್ಲಿ ಕಡಿಮೆ ಒತ್ತಡ ವಿಸ್ತರಿಸಿರುವ ಪ್ರದೇಶ ಇರುವುದ್ರಿಂದ ಜೂನ್ 24-28ವರೆಗೆ ವ್ಯಾಪಕವಾಗಿ ಮಳೆಯಾಗಲಿದೆ. ಜೊತೆಗೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಜೂನ್ 24-26ವರೆಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ. 27 ಹಾಗೂ 28 ರಾಜ್ಯದ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಬೆಂಗಳೂರು ನಗರದಲ್ಲಿ ಮುಂದಿನ 2 ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29° ಮತ್ತು ಕನಿಷ್ಠ ಉಷ್ಣಾಂಶ 20° ಇರಲಿದೆ.
Last Updated : Jun 27, 2021, 11:33 AM IST