ಕರ್ನಾಟಕ

karnataka

ETV Bharat / city

ಬಿಡ್ಡರ್​ಗಳಿಂದ ಸಂಗ್ರಹಿಸುವ ಭದ್ರತಾ ಠೇವಣಿ ಮೊತ್ತದ ಮೇಲೆ ರಿಯಾಯಿತಿ ವಿಸ್ತರಣೆ - KTPP Act

ಕೇಂದ್ರ ಸರ್ಕಾರವು ಈ ಹಿಂದೆ ಸಾರ್ವಜನಿಕ ಸಂಗ್ರಹಣೆಗಳ ಟೆಂಡರ್​ಗಳಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಲು ಅನುಕೂಲವಾಗುವಂತೆ ಹಾಗೂ ಸ್ಪರ್ಧಾತ್ಮಕ ದರ ಪಡೆಯುವ ದೃಷ್ಟಿಯಿಂದ ಟೆಂಡರ್ ಮೇಲಿನ ಭದ್ರತಾ ಠೇವಣಿಗೆ ರಿಯಾಯಿತಿ ನೀಡುವುದನ್ನು 31 ಮಾರ್ಚ್ 2023ರ ವರೆಗೆ ವಿಸ್ತರಿಸಿತ್ತು. ಇದೀಗ ರಾಜ್ಯ ಸರ್ಕಾರವೂ ಭದ್ರತಾ ಠೇವಣಿ ರಿಯಾಯಿತಿ ವಿಸ್ತರಿಸಿದೆ.

Vidhana Soudha
ವಿಧಾನಸೌಧ

By

Published : Aug 12, 2022, 9:24 AM IST

ಬೆಂಗಳೂರು: ಕೆಟಿಪಿಪಿ ಕಾಯ್ದೆಯಡಿ ಸಾರ್ವಜನಿಕ ಸಾಮಗ್ರಿಗಳನ್ನು ಖರೀದಿಗಾಗಿ ಬಿಡ್ಡರ್​ಗಳಿಂದ ಸಂಗ್ರಹಿಸಲಾಗುವ ಭದ್ರತಾ ಠೇವಣಿ ಮೊತ್ತದ ಮೇಲಿನ ರಿಯಾಯಿತಿ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

31 ಮಾರ್ಚ್ 2023ರ ವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಭದ್ರತಾ ಠೇವಣಿಯನ್ನು ಗುತ್ತಿಗೆ ಮೊತ್ತದ ಶೇ5 ರಿಂದ 3ಕ್ಕೆ ಇಳಿಕೆ ಮಾಡಲಾಗಿದೆ. ಈ ರಿಯಾಯಿತಿ ಎಲ್ಲ ಚಾಲ್ತಿಯಲ್ಲಿರುವ ಗುತ್ತಿಗೆ ಒಪ್ಪಂದಗಳು ಹಾಗೂ ಮಾರ್ಚ್ 31, 2023ವರೆಗೆ ಕರೆಯಲಾಗುವ ಟೆಂಡರ್ ಹಾಗೂ ಮಾಡಿಕೊಳ್ಳಲಾಗುವ ಒಪ್ಪಂದಗಳಿಗೆ ಅನ್ವಯವಾಗಲಿದೆ.

ಕೋವಿಡ್ ಸಂದರ್ಭ ಕೇಂದ್ರ ಸರ್ಕಾರ ಸಾರ್ವಜನಿಕ ಸಂಗ್ರಹಣೆಗಳ ಟೆಂಡರ್​ಗಳಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಲು ಅನುಕೂಲವಾಗುವಂತೆ ಹಾಗೂ ಸ್ಪರ್ಧಾತ್ಮಕ ದರ ಪಡೆಯುವ ದೃಷ್ಟಿಯಿಂದ ಟೆಂಡರ್ ಮೇಲಿನ ಭದ್ರತಾ ಠೇವಣಿಗೆ ರಿಯಾಯಿತಿ ನೀಡುವುದನ್ನು 31 ಮಾರ್ಚ್ 2023 ವರೆಗೆ ವಿಸ್ತರಿಸಿತ್ತು. ಇದೀಗ ರಾಜ್ಯ ಸರ್ಕಾರವೂ ಭದ್ರತಾ ಠೇವಣಿ ರಿಯಾಯಿತಿಯನ್ನು ವಿಸ್ತರಿಸಿದೆ.

ಇದನ್ನೂ ಓದಿ:ಹು-ಧಾ ಜನತೆಯ ಜೇಬಿಗೆ ಪಾಲಿಕೆ ಕತ್ತರಿ; ಭದ್ರತಾ ಠೇವಣಿ ಹೊರೆಯ ಬರೆ

ABOUT THE AUTHOR

...view details