ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೋವಿಡ್ 2ನೇ ಅಲೆಯಿಂದಲ್ಲೇ ಇನ್ನು ಜನಸಾಮಾನ್ಯರು ಸುಧಾರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ 3ನೇ ಅಲೆಯ ಮುಚ್ಚರಿಕಾ ಕ್ರಮದ ಕುರಿತು ತಜ್ಞರು ಎಚ್ಚರಿಕೆ ನೀಡ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ತಜ್ಞರ ಸಮಿತಿಯು ರಚನೆಯಾಗಿದ್ದು, ನಿನ್ನೆಯಷ್ಟೇ ಮಧ್ಯಂತರ ವರದಿಯನ್ನ ತಜ್ಞರು ಸಲ್ಲಿಕೆ ಮಾಡಿದ್ದಾರೆ. ಹಾಗಾದರೆ ತಜ್ಞರು ಕೊಟ್ಟಿರುವ ವರದಿಯನ್ನ ಸರ್ಕಾರ ಪಾಲಿಸಿದರೆ ಸಾಕಾ? ಕೋವಿಡ್ ಮೂರನೇ ಅಲೆ ಹೇಗೆ ತಡೆಯ ಬಹುದು? ಇಷ್ಟಕ್ಕೂ ತಜ್ಞರ ವರದಿ ಕೇವಲ ಮುಂಜಾಗ್ರತಾ ಕ್ರಮಕ್ಕೆ ಮಾತ್ರ ಇದ್ದು, ಸಾಂಕ್ರಾಮಿಕ ರೋಗದ ತೀವ್ರತೆ ಆಧಾರದಲ್ಲಿ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು? ಮಾನವ ಸಂಪನ್ಮೂಲ ಕೊರತೆ ನೀಗಿಸುವುದು ಹೇಗೆ? ಚಟುವಟಿಕೆಗಳು ಶುರುವಾದರೆ ಅಲ್ಲಿ ನಿಯಂತ್ರಣ ಮಾಡುವುದು ಹೇಗೆ ಎಂಬುದುರ ಕುರಿತು ಶಿಫಾರಸ್ಸು ಮಾಡಿದ್ದಾರೆ.
ಮೂರನೇ ಅಲೆ ಬಾರದಂತೆ ತಡಿಬೇಕು ಅಂದರೆ ಸರ್ಕಾರ ಹೊರಡಿಸುವ ನಿಯಮಗಳನ್ನ ಪಾಲಿಸುವುದರಲ್ಲಿ ಸಾರ್ವಜನಿಕರ ಪಾತ್ರವೇ ಮಹತ್ವವಾದದ್ದು. ಯಾಕೆಂದರೆ ತಜ್ಞರು ಏನೇ ವರದಿ ಕೊಟ್ಟರು, ಸರ್ಕಾರವೂ ಏನೇ ಕಠಿಣ ಕ್ರಮ ಜಾರಿ ಮಾಡಿದ್ದರೂ ಸಹ ಜನರು ಅದನ್ನ ಪಾಲನೆ ಮಾಡದೇ ಇದ್ದರೆ ಕೊರೊನಾ ಸೋಂಕು ರೂಪಾಂತರ ಪಡೆದು ಅಲೆಗಳನ್ನ ಸೃಷ್ಟಿಸಲು ಕಾರಣವಾಗುತ್ತೆ.
ಮೂರನೇ ಅಲೆ ತಡೆಗೆ ತಜ್ಞರ ಸಲಹೆ
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಮಕ್ಕಳ ಪ್ರಕರಣಗಳನ್ನ ಆಧರಿಸಿ ವರದಿ ಅಂದಾಜಿಸಿದ್ದಾರೆ. ಮೂರನೇ ಅಲೆಯು ಎಂಟು ವಾರಗಳ ಕಾಲ ಬಾಧಿಸಲಿದ್ದು, ಮಕ್ಕಳಿಗೆ ಸೋಂಕು ಹೆಚ್ಚು ತಗುಲುವ ಸಾಧ್ಯತೆ ಇದೆ. ಆದರೆ ಹಿರಿಯರಿಗೆ ಹೋಲಿಸಿದರೆ ಸೋಂಕಿನ ತೀವ್ರತೆ ಕಡಿಮೆ ಇರಲಿದ್ದು, ಶೇ.85 ರಷ್ಟು ಮಕ್ಕಳಲ್ಲಿ ರೋಗ ಲಕ್ಷಣ ಇಲ್ಲದೇ ಇರುವುದು ಅಥವಾ ಕಡಿಮೆ ಲಕ್ಷಣ ಹೊಂದಿರುತ್ತಾರೆ ಅಂತ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹೀಗಾಗಿ, ಮಕ್ಕಳಿಗೆ ಸೋಂಕು ಹೊರಗಿನಿಂದಲ್ಲ ಬದಲಿಗೆ ಮನೆಯವರಿಂದಲ್ಲೇ ಹರಡುವ ಸಾಧ್ಯತೆ ಇದೆ. ಈಗಾಗಲೇ ವಾಣಿಜ್ಯ ಚಟುವಟಿಕೆಗಳು ಶುರುವಾಗಿದ್ದು, ಈ ಪೈಕಿ ಹಿರಿಯರೇ ಹೆಚ್ಚು ಹೊರಗೆ ಓಡಾಡುವುದರಿಂದ ಮುಂಜಾಗ್ರತೆಯನ್ನ ವಹಿಸಬೇಕಾಗುತ್ತದೆ.
ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲೂ ಡೆಲ್ಟಾ ಪ್ಲಸ್ ವೈರಸ್ ಪ್ರಕರಣ ಪತ್ತೆ- ಆರೋಗ್ಯ ಸಚಿವ ಡಾ.ಸುಧಾಕರ್
ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿದ್ದರೆ 3ನೇ ಅಲೆ ಪಕ್ಕಾ - ಡಾ ಅನಿಲ್
ವಿಕ್ರಂ ಆಸ್ಪತ್ರೆಯ ಮಣಿಪಾಲ್ ಯೂನಿಟ್‌ನ ವೈದ್ಯ ಡಾ. ಅನಿಲ್.ಎಂ.ಯು ಮಾತಾನಾಡಿದ್ದು, ಮೂರನೇ ಅಲೆಯ ಕುರಿತು ಚರ್ಚೆ ನಡೆಯುತ್ತಿದ್ದು, ತಜ್ಞರು ಕೂಡ ವರದಿ ನೀಡಿ ಶಿಫಾರಸ್ಸು ಮಾಡಿದ್ದಾರೆ. ಅಂದಹಾಗೆ ಕೊರೊನಾ ಮೂರನೇ ಅಲೆಯು ಬರಲುಬಹುದು, ಬರದೇಯು ಇರಬಹುದು. ಆದರೆ ನಮ್ಮ ಜಾಗೃತೆಯಲ್ಲಿ ನಾವು ಇರುವುದು ಬಹಳ ಒಳಿತು ಎಂದು ಹೇಳಿದ್ದಾರೆ.