ಕರ್ನಾಟಕ

karnataka

ETV Bharat / city

ಇಂದಿರಾಗಾಂಧಿ ದೇಶದ ಮಹಿಳೆಯರಿಗೆ ಆದರ್ಶ : ಕೆಪಿಸಿಸಿ ಕಾಯಾಧ್ಯಕ್ಷ ಈಶ್ವರ್​ ಖಂಡ್ರೆ - birth anniversary celebration

ಇಂದಿರಾಗಾಂಧಿ(Indira gandhi birth anniversary)ದೇಶದ ಐಕ್ಯತೆಗೆ ಹೋರಾಡಿದವರು. ಗಾಂಧಿ ಕುಟುಂಬವೇ ರಾಷ್ಟ್ರದ ಅಭಿವೃದ್ಧಿಗೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದೆ. ಪ್ರತಿಯೊಬ್ಬರು ಇಂದಿರಾಗಾಂಧಿ ಆದರ್ಶ ಅನುಸರಿಸಿ ಮುನ್ನಡೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದರು..

Indira gandhi birth anniversary
ಇಂದಿರಾಗಾಂಧಿ

By

Published : Nov 19, 2021, 7:45 PM IST

ಬೆಂಗಳೂರು :ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಮಹಿಳಾ ಘಟಕದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ (Indira gandhi birth anniversary) ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಇಂದಿರಾಗಾಂಧಿ ಜಗತ್ತಿನ ಮಹಿಳೆಯರಿಗೆ ಆದರ್ಶವಾಗಿದ್ದರು. ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂಬುದನ್ನು ತೋರಿಸಿಕೊಟ್ಟರು.

ಗಾಂಧಿ ಕುಟುಂಬ ದೇಶದ ಏಕತೆ, ಅಖಂಡತೆಗಾಗಿ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಸಾಕಷ್ಟು ಸಲ ಸೆರೆವಾಸವನ್ನು ಅನುಭವಿಸಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ದೇಶದ ಐಕ್ಯತೆಗೆ ಹೋರಾಡಿದವರು ಇಂದಿರಾಗಾಂಧಿ. ಗಾಂಧಿ ಕುಟುಂಬವೇ ರಾಷ್ಟ್ರದ ಅಭಿವೃದ್ಧಿಗೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದೆ. ಇಂದು ಪ್ರತಿಯೊಬ್ಬರು ಇಂದಿರಾಗಾಂಧಿ ಆದರ್ಶ ಅನುಸರಿಸಿ ಮುನ್ನಡೆಯಬೇಕು ಎಂದರು.

ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ನಮ್ಮ ನಾಯಕರು ಕೇಳೋ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ಕೊಡಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್​ಎಸ್​ಎಸ್, ಬಿಜೆಪಿ ಎಲ್ಲಿತ್ತು? ಬ್ರಿಟಿಷರ ಒಂದು ಭಾಗವಾಗಿ ಆರ್​ಎಸ್​ಎಎಸ್​ ಇತ್ತು. ಬ್ರಿಟಿಷರ ಪರವಾಗಿ ಆರ್​ಎಸ್​ಎಸ್​ ನಾಯರಿದ್ದರು ಎಂದು ಆರೋಪಿಸಿದರು.
ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, ಕೇಂದ್ರದ ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪ ಮಾತನಾಡಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ, ರಾಮಲಿಂಗಾರೆಡ್ಡಿ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೇಂದ್ರದ ಮಾಜಿ ಸಚಿವ ಕೆಎಚ್ ಮುನಿಯಪ್ಪ ವಿಧಾನಪರಿಷತ್ ಸದಸ್ಯ ಬಕೆ ಹರಿಪ್ರಸಾದ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಮಹಿಳಾ ಘಟಕದ ಹೊಸ ಬಾವುಟ ಅನಾವರಣ ಮಾಡಲಾಯಿತು. ನೇತ್ರ ದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ABOUT THE AUTHOR

...view details