ಕರ್ನಾಟಕ

karnataka

ETV Bharat / city

ಮರದ ಕೊಂಬೆ ಬಿದ್ದು ಜೀವನ್ಮರಣದ ಹೋರಾಟ ನಡೆಸಿದ್ದ ಬಾಲಕಿ ಸಾವು... BBMP ನಿರ್ಲಕ್ಷ್ಯ ಮರುಕಳಿಸಬಾರದು ಎಂದ HDK - ಮರದ ಕೊಂಬೆ ಬಿದ್ದು ಜೀವನ್ಮರಣದ ಹೋರಾಟ ನಡೆಸಿದ್ದ ಬಾಲಕಿ ಸಾವು

ಮರದ ಕೊಂಬೆ ಬಿದ್ದು ಎರಡು ವರ್ಷದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ರೆಚೆಲ್ ಪ್ರಿಷಾ ಕೊನೆಗೂ ಸಾವನ್ನಪ್ಪಿದ್ದಾಳೆ. ಈ ಬಾಲಕಿ ಎರಡು ವರ್ಷದಿಂದ ಮಣಿಪಾಲ್ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಳು.

Ex CM HDK tweet on the girl death
Ex CM HDK tweet on the girl death

By

Published : Feb 11, 2022, 2:29 AM IST

ಬೆಂಗಳೂರು :ಮರದ ಕೊಂಬೆ ಬಿದ್ದು ಎರಡು ವರ್ಷಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ರೆಚೆಲ್​ ಪ್ರಿಷಾ ಕೊನೆಗೂ ಸಾವನ್ನಪ್ಪಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಮರದ ಕೊಂಬೆ ತಲೆಯ ಮೇಲೆ ಬಿದ್ದು ಗಾಯಗೊಂಡು 702 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ರೆಚೆಲ್ ಪ್ರಿಷಾ ಇಂದು ಉಸಿರು ಚೆಲ್ಲಿರುವ ವಿಷಯ ತಿಳಿದು ಬಹಳ ದುಃಖವಾಯಿತು. ಆ ಮಗು ಬದುಕಿ ಬರುತ್ತಾಳೆಂಬ ನಿರೀಕ್ಷೆ ನನ್ನದಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿರಿ:ಮರದ ಕೊಂಬೆ ಬಿದ್ದು 2 ವರ್ಷದಿಂದ ಜೀವನ್ಮರಣ ಹೋರಾಟ ನಡೆಸಿದ್ದ ಬೆಂಗಳೂರು ಬಾಲಕಿ ಸಾವು

ಟ್ವೀಟ್ ಮಾಡಿರುವ ಹೆಚ್​ಡಿಕೆ, ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಕ್ಷೇಮ ವಿಚಾರಿಸಿದ್ದೆ. ಕೆಲ ಸಮಯ ಮಗುವಿನ ಜತೆಯಲ್ಲೇ ಸಮಯ ಕಳೆದಿದ್ದೆ. ಸತತ ಎರಡು ವರ್ಷ ನಿರಂತರವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ರಚೆಲ್ ಅಗಲಿಕೆ ಸಹಿಸಲು ನನಗೆ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಆ ಕಂದಮ್ಮನಿಗೆ ಭಗವಂತ ಚಿರಶಾಂತಿ ದಯಪಾಲಿಸಲಿ. ಇಷ್ಟು ದೀರ್ಘಕಾಲ ಮಗು ಮನೆಗೆ ಬರುತ್ತಾಳೆ ಎಂದು ನಂಬಿ ಪರಿತಪಿಸಿದ್ದ ತಂದೆ-ತಾಯಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಇನ್ನಾದರೂ ಈ ಬಗೆಯ ಸಾವುಗಳು ನಿಲ್ಲಲಿ ಹಾಗೂ ಬಿಬಿಎಂಪಿಯ ಇಂಥ ನಿರ್ಲಕ್ಷ್ಯ ಮರುಕಳಿಸುವುದು ಬೇಡ ಎಂದಿದ್ದಾರೆ.

ABOUT THE AUTHOR

...view details