ಕರ್ನಾಟಕ

karnataka

ETV Bharat / city

ಬಿಬಿಎಂಪಿ ಬಜೆಟ್​ಗೆ ಮುಂದಿನ ವಾರವೇ ಮುಹೂರ್ತ ನಿಗದಿ: ಆಯವ್ಯಯ ಗಾತ್ರ ಎಷ್ಟು ಗೊತ್ತಾ? - ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬಿಬಿಎಂಪಿಯ ಆದಾಯ 4,500 ಸಾವಿರ ಕೋಟಿ ಇದ್ದು, ಎರಡೂ ಸೇರಿದಾಗ 8 ಸಾವಿರ ಕೋಟಿ ಒಟ್ಟು ಆದಾಯ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಡಳಿತಗಾರರು ಬಜೆಟ್ ಮಾಡುತ್ತಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದರು.

bbmp-budget
ಬಿಬಿಎಂಪಿ ಬಜೆಟ್

By

Published : Mar 20, 2021, 7:58 PM IST

ಬೆಂಗಳೂರು: ರಾಜ್ಯ ಸರ್ಕಾರ 2021-22ನೇ ಸಾಲಿನಲ್ಲಿ 3,000 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, 15ನೇ ಹಣಕಾಸು ಆಯೋಗದಡಿ 421 ಕೋಟಿ, ಜೊತೆಗೆ ಎಸ್​​ಎಫ್​​ಸಿ ಟೈಡ್ - ಅನ್ ಟೈಡ್ ಅನುದಾನದಡಿ 250 ಕೋಟಿ ರೂ. ಸೇರಿದಂತೆ ಒಟ್ಟು 3600 ಕೋಟಿಯಷ್ಟು ರಾಜ್ಯ ಸರ್ಕಾರದ ಅನುದಾನ ಇದೆ. ಈ ನದುವೆ ಮುಂದಿನ ವಾರದಲ್ಲಿ ಬಿಬಿಎಂಪಿ ಬಜೆಟ್​ ಮಂಡನೆಗೆ ದಿನಾಂಕ ನಿಗದಿಯಾಗಲಿದೆ.

ಬಿಬಿಎಂಪಿ ಬಜೆಟ್ ಕುರಿತು ಆಯುಕ್ತರ ಮಾಹಿತಿ

ಬಿಬಿಎಂಪಿಯ ಆದಾಯ 4,500 ಸಾವಿರ ಕೋಟಿ ಇದ್ದು, ಎರಡೂ ಸೇರಿದಾಗ 8 ಸಾವಿರ ಕೋಟಿ ಒಟ್ಟು ಆದಾಯ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಡಳಿತಗಾರರು ಬಜೆಟ್ ಮಾಡುತ್ತಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದರು.

ಅಲ್ಲದೇ ಪ್ರತೀ ವರ್ಷ ಆದಾಯಕ್ಕಿಂತ ಹೆಚ್ಚಿನ ಬಜೆಟ್ ಮಂಡಿಸಿ, ಗುತ್ತಿಗೆದಾರರಿಗೆ ಸಾವಿರಾರು ಕೋಟಿ ಬಿಲ್ ಬಾಕಿ ಇಡಲಾಗಿದೆ. ಸದ್ಯ ಜನಪ್ರತಿನಿಧಿಗಳ ಬದಲು, ಆಡಳಿತಗಾರರ ಅಧಿಕಾರವಿದ್ದು, ಹೀಗಾಗಿ ಈ ಬಾರಿಯಾದರೂ ವಾಸ್ತವಿಕ ಬಜೆಟ್ ಮಂಡಿಸಲು ಅಧಿಕಾರಿಗಳು ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.

ಪಾಲಿಕೆಯ ನಿತ್ಯ ನಿರ್ವಹಣೆಗೆ ಪ್ರತೀ ವರ್ಷ ಬಿಬಿಎಂಪಿಯಲ್ಲಿ 6000 ಕೋಟಿ ರೂ. ಖರ್ಚಾಗುತ್ತದೆ. ಇದನ್ನು ಗಣನೆಗೆ ತೆಗೆದುಕೊಂಡು ಹಳೇ ಯೋಜನೆಗಳನ್ನು ಮುಕ್ತಾಯಗೊಳಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಆಯುಕ್ತರು ತಿಳಿಸಿದರು.

ಬಜೆಟ್ ನಲ್ಲಿ ಯಾವ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬೇಕೆಂದು ಈಗಾಗಲೇ ಮಾಜಿ ಮೇಯರ್ ಗಳ ಸಭೆ ನಡೆಸಲಾಗಿದೆ. ಹಲವಾರು ಸುತ್ತಿನ ಅಧಿಕಾರಿಗಳ ಸಭೆಯನ್ನೂ ನಡೆಸಲಾಗಿದ್ದು, ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಬಜೆಟ್ ಸಿದ್ಧಪಡಿಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲೇ ಬಜೆಟ್ ಮಂಡಿಸಲಾಗುತ್ತಿದ್ದು, ಮುಂದಿನ ವಾರವೇ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.

ಈ ಬಾರಿ ಬಜೆಟ್ ಮಂಡನೆ ಹೇಗೆ..?

ಪ್ರತೀ ವರ್ಷ ಜನಪ್ರತಿನಿಧಿಗಳ ಅಧಿಕಾರಾವಧಿಯಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರು ಕೌನ್ಸಿಲ್ ಸಭಾಂಗಣದಲ್ಲಿ ಬಜೆಟ್ ಮಂಡಿಸುತ್ತಿದ್ದರು. ಆದರೆ ಈ ಬಾರಿ ಚುನಾವಣೆ ಇನ್ನೂ ನಡೆಯದೇ ಇರುವ ಕಾರಣ, ಆಯುಕ್ತರೇ ಬಜೆಟ್ ಓದಬಹುದು. ನಂತರ ವಿಶೇಷ ಆಡಳಿತಾಧಿಕಾರಿ ಗೌರವ್ ಗುಪ್ತ ಅನುಮೋದಿಸಿ ಸರ್ಕಾರಕ್ಕೆ ಅನುಮೋದನೆ ಕಳುಹಿಸಿಕೊಡುವ ಸಾಧ್ಯತೆ ಇದೆ. ಅಥವಾ ಆಡಳಿತಗಾರರೇ ಬಜೆಟ್ಅನ್ನು ಸರ್ಕಾರಕ್ಕೆ ಅನುಮೋದನೆಗೆ ನೇರವಾಗಿ ಕಳಿಸಿಕೊಡುವ ಸಾಧ್ಯತೆ ಇದೆ ಎಂದೂ ಹೇಳಲಾಗ್ತಿದೆ. ಒಟ್ಟಿನಲ್ಲಿ ಬಜೆಟ್ ಗಾತ್ರ 8000 ಕೋಟಿ ಮೀರದಂತೆ ಇರಲಿದೆ.

ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಮಾತನಾಡಿ, ಬಿಬಿಎಂಪಿ ಬಜೆಟ್ ಬ್ಯಾಲೆನ್ಸ್ ಮಾಡೋದು ಸವಾಲಾಗಿದೆ. ಬಿಬಿಎಂಪಿ ಪಾವತಿಸಬೇಕಾದ ಖರ್ಚು-ವೆಚ್ಚಗಳು ಜಾಸ್ತಿ ಇವೆ. ನಾವೀಗ ರಸ್ತೆಗಳಲ್ಲಿ ಗುಂಡಿ ಮುಚ್ಚಲೇಬೇಕು. ಪಾರ್ಕ್ ಗಳ ನಿರ್ವಹಣೆ ಮಾಡಬೇಕು. ಈ ಎಲ್ಲವೂ ಕಮಿಟೆಡ್ ಎಕ್ಸಪೆಂಡೀಚರ್ (ಖರ್ಚು ವೆಚ್ಚ) ಆಗಿವೆ. ಬಿಡುಗಡೆಯಾಗಬೇಕಿರುವ ಬಿಲ್ ಗಳ ಬ್ಯಾಲೆನ್ಸ್ ಮಾಡಿಕೊಂಡು ಜನರ ಮೇಲೆ ಹೊರೆಯಾಗದಂತೆ ಬಜೆಟ್ ತಯಾರಿ ಮಾಡಲಾಗ್ತಿದೆ. ಟ್ಯಾಕ್ಸ್ ಹೆಚ್ಚಳ ಮಾಡಿದರೂ ಅದು ಜನರ ಮೇಲೆ ಹೊರೆಯಾಗದಂತೆ ಸಂಪನ್ಮೂಲಗಳ ಕ್ರೋಢೀಕರಣದ ಬಗ್ಗೆಯೂ ಸಿದ್ಧತೆ ಆಗಿದೆ. ಕೋವಿಡ್ ನಿಂದ ಒಂದು ವರ್ಷ ಶಾಲೆಗಳು ನಡೆದಿಲ್ಲ.

ಇದೀಗ 6 ರಿಂದ 10 ನೇ ತರಗತಿವರೆಗೆ ಶಾಲೆಗಳು ನಡೀತಿವೆ. ಸದ್ಯ ಬಿಬಿಎಂಪಿಯ ಅಗತ್ಯತೆಗಳನ್ನ ನೋಡಿದರೆ 15 ಸಾವಿರ ಕೋಟಿ ಬಜೆಟ್ ಬೇಕು. ಆದರೆ ಅಷ್ಟೊಂದು ಆದಾಯ ಮೂಲ ನಮ್ಮಲ್ಲಿಲ್ಲ. ಖರ್ಚು ವೆಚ್ಚಗಳು ಹೆಚ್ಚಾಗಿವೆ. ಬಜೆಟ್ ಬ್ಯಾಲೆನ್ಸ್‌ ಮಾಡುವುದಕ್ಕೆ ಪ್ರಯತ್ನಿಸ್ತಿದ್ದೇವೆ ಎಂದು ತಿಳಿಸಿದರು.

ABOUT THE AUTHOR

...view details