ಕರ್ನಾಟಕ

karnataka

ETV Bharat / city

ಕುವೈತ್​ನಲ್ಲಿ ಅತಂತ್ರವಾದ ಕನ್ನಡಿಗರನ್ನು ಮರಳಿ ಕರೆತರುವಂತೆ ಸಿಎಂಗೆ ಖಂಡ್ರೆ ಪತ್ರ - Bangalore News

ಅರೆ ಶಿಕ್ಷಿತ ಮತ್ತು ಅಶಿಕ್ಷಿತರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಹೀಗೆ ತೊಂದರೆಗೆ ಸಿಲುಕಿಸಿರುವ ಮೆಗಾ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಯುವಕರನ್ನು ದೇಶಕ್ಕೆ ಮರಳಿ ಕರೆತರಲು ವ್ಯವಸ್ಥೆ ಮಾಡಬೇಕು..

Eshwar khandre letter to cm bs yadiyurappa
ಕನ್ನಡಿಗರನ್ನು ಅತಂತ್ರಗೊಳಿಸಿರುವ ಕುವೈತ್​ನ ಮೆಗಾ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಿ:ಸಿಎಂಗೆ ಖಂಡ್ರೆ ಪತ್ರ

By

Published : Jul 31, 2020, 6:04 PM IST

ಬೆಂಗಳೂರು :ಉತ್ತರಕರ್ನಾಟಕದ ಯುವಕರನ್ನು ಕುವೈತ್​ಗೆ ಕರೆದುಕೊಂಡು ಹೋಗಿ ಅತಂತ್ರ ಮಾಡಿರುವ ಮೆಗಾ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಿಎಂಗೆ ಪತ್ರ ಬರೆದಿದ್ದಾರೆ.

ಕುವೈತ್​ನ ಮೆಗಾ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಿ : ಸಿಎಂಗೆ ಖಂಡ್ರೆ ಪತ್ರ

ತಮ್ಮ ಪತ್ರದಲ್ಲಿ ಮೆಗಾ ಇನ್ಫ್ರಾಸ್ಟ್ರಕ್ಚರ್ ಎಂಬ ಸಂಸ್ಥೆಯೊಂದು ಉತ್ತರಕರ್ನಾಟಕದ ಯುವಕರನ್ನು ಕೆಲಸ ಕೊಡಿಸುವುದಾಗಿ ಕುವೈತ್​ಗೆ ಕರೆದೊಯ್ದಿದಿದೆ. ಈಗ ಅವರುಗಳ ವೀಸಾ ಅವಧಿ ಸಹ ಮುಗಿದು ಹೋಗಿದೆ.‌ ಭಾಷೆ ಬಾರದ ದೇಶದಲ್ಲಿ ಅವರೆಲ್ಲರೂ ಊಟಕ್ಕೂ ಗತಿ ಇಲ್ಲದೇ, ಸಂಕಷ್ಟಕ್ಕೆ ಸಿಲುಕಿ ನರಳುವಂತಾಗಿದೆ. ಭಾರತದ ಅರೆ ಶಿಕ್ಷಿತ ಮತ್ತು ಅಶಿಕ್ಷಿತರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಹೀಗೆ ತೊಂದರೆಗೆ ಸಿಲುಕಿಸಿರುವ ಮೆಗಾ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಯುವಕರನ್ನು ದೇಶಕ್ಕೆ ಮರಳಿ ಕರೆತರಲು ವ್ಯವಸ್ಥೆ ಮಾಡಬೇಕು.

ಯುವಕರನ್ನು ಮರಳಿ ದೇಶಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ಮಾತನಾಡಲು ನಾನು ಈ ಮೂಲಕ ತಮ್ಮಲ್ಲಿ ಕೋರುತ್ತಿದ್ದೇನೆ ಎಂದಿದ್ದಾರೆ.

ABOUT THE AUTHOR

...view details