ಕರ್ನಾಟಕ

karnataka

ETV Bharat / city

ಕೊರೊನಾದಿಂದ ಖಾಕಿ ರಕ್ಷಿಸಲು ಇಮ್ಯುನಿಟಿ ಬೂಸ್ಟ್​ಗೆ ಮುಂದಾದ ಪೊಲೀಸ್​ ಇಲಾಖೆ - ಪೊಲೀಸರಿ ಮೊಟ್ಟೆ ವಿತರಣೆ

ಕೊರೊನಾ ಸೋಂಕಿತ ಪೊಲೀಸ್​ ಸಿಬ್ಬಂದಿಗೆ ಮೊಟ್ಟೆ ಹಾಗೂ ಪ್ರೋಟೀನ್​ ಪೌಡರ್​​ ನೀಡಲು ಪೊಲೀಸ್​ ಇಲಾಖೆ ಮುಂದಾಗಿದೆ. ಇಮ್ಯುನಿಟಿ ಪವರ್​ ಜಾಸ್ತಿ ಮಾಡಿ ಸಿಬ್ಬಂದಿಯನ್ನು ಕೊರೊನಾದಿಂದ ಗುಣಮುಖರನ್ನಾಗಿಸಲು ತಯಾರಿ ನಡೆಸುತ್ತಿದೆ..

esha-panth-giving-egg-to-corona-infected-police
ಪೊಲೀಸ್​ ಇಲಾಖೆ

By

Published : Aug 3, 2020, 5:31 PM IST

ಬೆಂಗಳೂರು :ಪೊಲೀಸರು ಕೊರೊನಾ ಸೋಂಕಿಗೆ ಗುರಿಯಾಗುತ್ತಿರುವ ಹಿನ್ನೆಲೆ ಅವರ ಇಮ್ಯುನಿಟಿ ಪವರ್ ಜಾಸ್ತಿ ಮಾಡಿ ಕೊರೊನಾ ಸೋಂಕಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.

ಕೊರೊನಾ ದಿಂದ ಖಾಕಿ ರಕ್ಷಿಸಲು ಇಮ್ಯುನಿಟಿ ಬೂಸ್ಟ್​ಗೆ ಮುಂದಾದ ಪೊಲೀಸ್​ ಇಲಾಖೆ

ಬೀಯಿಂಗ್ ಯು ಹ್ಯಾಪಿ ಹೆನ್ಸ್​​ (Being you happy hens) ಸಂಸ್ಥೆಯ ಸಹಯೋಗದಿಂದ ಕೊರೊನಾ ಸೋಂಕಿತ ಹಾಗೂ ಕ್ವಾರಂಟೈನ್​​ನಲ್ಲಿರುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮೊಟ್ಟೆಯನ್ನು ನೀಡಲಾಗುತ್ತಿದ್ದು, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಪಿ ಈಶಾ ಪಂತ್​​, ಪೊಲೀಸರಲ್ಲಿಯೂ ಹೆಚ್ಚಾಗಿ ಕೊರೊನಾ ಸೋಂಕು ಕಂಡು ಬರುತ್ತಿರುವ ಕಾರಣ, ಇಮ್ಯುನಿಟಿ, ಪ್ರೋಟೀನ್​​ ಜಾಸ್ತಿಯಾಗಲು ರೇಷನ್​ ಕಿಟ್​​, ಪ್ರೋಟೀನ್ ಪೌಡರ್​​​ ಹಾಗೂ ಮೊಟ್ಟೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ABOUT THE AUTHOR

...view details