ಕರ್ನಾಟಕ

karnataka

ETV Bharat / city

ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನೂ ಮಾತೃ ಭಾಷೆಯಲ್ಲಿ ಮಾಡಬೇಕು : ಉಪ ರಾಷ್ಟ್ರಪತಿ - ಮಾತೃ ಭಾಷೆಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ

ಮಹಾತ್ಮ ಗಾಂಧೀಜಿಯವರು ಹೇಳಿರುವಂತೆ ವಿಶ್ವವಿದ್ಯಾನಿಲಯದ ಶಿಕ್ಷಣದ ಗುರಿಯು ಜನರ ನಿಜವಾದ ಸೇವಕರಾಗಿ ಹೊರ ಹೊಮ್ಮಬೇಕು. ಇದರಂತೆ ಪ್ರೊ. ಎಂ ಆರ್ ದೊರೆಸ್ವಾಮಿಯವರು ಶಿಕ್ಷಣ ಕ್ಷೇತ್ರದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಪಿಇಎಸ್ ವಿಶ್ವವಿದ್ಯಾಲಯವು ಈ ನಿಟ್ಟಿನಲ್ಲಿ ಮುಂದುವರೆದಿದೆ..

engineering-education-should-also-be-done-in-the-mother-tongue
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

By

Published : Nov 15, 2021, 6:45 PM IST

ಬೆಂಗಳೂರು :ಪಿಇಎಸ್ ವಿಶ್ವ ವಿದ್ಯಾಲಯದಲ್ಲಿಂದು 6ನೇ ಘಟಿಕೋತ್ಸವ ಸಮಾರಂಭ (6th convocation at PES university) ನಡೆಯಿತು. ಘಟಿಕೋತ್ಸವದಲ್ಲಿ ಸುಮಾರು 2246 ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಪದವಿ ಪ್ರಮಾಣಪತ್ರ ನೀಡಲಾಯಿತು.

ಈ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು (M Venkaiah Naidu) ಭಾಗಿಯಾಗಿ ಉನ್ನತ ದರ್ಜೆಯಲ್ಲಿ ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳು ಹಾಗೂ ಪದವಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು.

ಬಳಿಕ ಮಾತಾನಾಡಿದ ವೆಂಕಯ್ಯ ನಾಯ್ಡು ಅವರು, ತಮ್ಮ ಘಟಿಕೋತ್ಸವ ಭಾಷಣವನ್ನು ಕನ್ನಡದಲ್ಲಿ ಪ್ರಾರಂಭಿಸಿ ಕೇಂದ್ರ ಸರ್ಕಾರ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಉಪಯೋಗ ಹಾಗೂ ಅದರ ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಈ ಇಂದಿನ ಸಾಧನೆಗೆ ಅಧ್ಯಾಪಕರ ಪರಿಶ್ರಮ, ಪೋಷಕರ ಸಹಕಾರ ಜೊತೆಗೆ ಈ ವಿದ್ಯಾ ಸಂಸ್ಥೆಯ ಬೆಂಬಲಕ್ಕಾಗಿ ಅವರನ್ನೆಲ್ಲಾ ಅಭಿನಂದಿಸಿದರು. ಕೊರೊನಾ ಸಮಸ್ಯೆಗೆ ಭಾರತೀಯ ವಿಜ್ಞಾನಿಗಳು ಆವಿಷ್ಕಾರ ಮಾಡಿದ ಲಸಿಕೆಗೆ ಪ್ರಪಂಚದಾದ್ಯಂತ ಉತ್ತಮ ಪ್ರತಿಕ್ರಿಯೆ ಬಂದಿದೆ.

ಈ ಲಸಿಕೆಯ ಪ್ರಯೋಗವು ಯಶಸ್ವಿಯಾಗಿದ್ದು, ಇದರ ಹಿಂದೆ ವೈದ್ಯರ, ದಾದಿಯರ ಹಾಗೂ ತಂತ್ರಜ್ಞಾನದ ಸಹಕಾರವನ್ನು ನೆನಪಿಸಿಕೊಂಡರು. ಇದೇ ರೀತಿಯಲ್ಲಿ ಇನ್ನು ಹಲವಾರು ಸಂಶೋಧನೆಯ ಅಗತ್ಯತೆಯನ್ನು ತಿಳಿಸಿದರು.

ಡ್ರೋನ್ ತಂತ್ರಜ್ಞಾನದ ಸಂಶೋಧನೆ ಅಗತ್ಯತೆಯ ಬಗ್ಗೆ ಮಾತನಾಡುತ್ತಾ, ಇದಕ್ಕಾಗಿ ಅಗತ್ಯವಿರುವ ಹೊಸ ಪಠ್ಯವನ್ನು ಇಂಜಿನಿಯರಿಂಗ್ ಕೋರ್ಸ್ ತೆರೆಯಬೇಕು. ಇಂದಿನ ಎಲ್ಲಾ ಪಠ್ಯಕ್ರಮವನ್ನು ಭಾರತೀಯ ಭಾಷೆಗಳಲ್ಲಿ ಅಭ್ಯಾಸ ಮಾಡಬೇಕು.

ಇದರಿಂದ ವಿಷಯಗಳನ್ನು ಸುಲಭವಾಗಿ ಮಾತೃ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುಬಹುದು. ಇದಕ್ಕಾಗಿ ಮಾತೃಭಾಷೆಯಲ್ಲಿ ತಮ್ಮ ಕಲಿಕೆ ಮಾಡುವುದು ಅತ್ಯಂತ ಅಗತ್ಯ ಎಂದರು.

ಇದೇ ರೀತಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನೂ ಸಹ ಮಾತೃಭಾಷೆಯಲ್ಲಿ ಮಾಡಬೇಕು. ನಮ್ಮ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಅಷ್ಟೇ ಅಲ್ಲ, ಸರ್ವೋನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳು ಇವರೆಲ್ಲರೂ ತಮ್ಮ ಮಾತೃಭಾಷೆಯಲ್ಲಿ ಅಭ್ಯಾಸವನ್ನು ಮಾಡಿದವರೇ.. ಹಾಗಾಗಿ, ಅವರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿಯವರು ಹೇಳಿರುವಂತೆ ವಿಶ್ವವಿದ್ಯಾನಿಲಯದ ಶಿಕ್ಷಣದ ಗುರಿಯು ಜನರ ನಿಜವಾದ ಸೇವಕರಾಗಿ ಹೊರ ಹೊಮ್ಮಬೇಕು. ಇದರಂತೆ ಪ್ರೊ. ಎಂ ಆರ್ ದೊರೆಸ್ವಾಮಿಯವರು ಶಿಕ್ಷಣ ಕ್ಷೇತ್ರದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಪಿಇಎಸ್ ವಿಶ್ವವಿದ್ಯಾಲಯವು ಈ ನಿಟ್ಟಿನಲ್ಲಿ ಮುಂದುವರೆದಿದೆ.

ಭಾರತದ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮಾಡಿರುವ ಸಾಧನೆಗಳಂತೆ ಕೇವಲ ಐದು ವರ್ಷಗಳಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಿ, ಸುಮಾರು 600 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದರ ಜೊತೆಗೆ 24 ಪೇಟೆಂಟ್​ಗಳನ್ನು ಮಾಡಿರುವುದು ಶ್ಲಾಘನೀಯ ಎಂದರು.

ಬಳಿಕ ಈ ಸಮಾರಂಭದಲ್ಲಿ ಗೌರವ ಫಲಕವನ್ನು ಅನಾವರಣ ಮಾಡಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಕರ್ನಾಟಕ ರಾಜ್ಯವು ಶಿಕ್ಷಣ ಕ್ಷೇತ್ರದಲ್ಲಿ ಭಾರತದಲ್ಲಿಯೇ ಅತ್ಯುತ್ತಮ ಸ್ಥಾನದಲ್ಲಿರುವುದಾಗಿ ತಿಳಿಸಿದರು. ಇವುಗಳಲ್ಲಿ ಪಿಇಎಸ್ ವಿಶ್ವವಿದ್ಯಾಲಯವು ಮುಂಚೂಣಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ಉನ್ನತ ವಿದ್ಯೆ ಹಾಗೂ ಉತ್ತಮ ಮೌಲ್ಯಗಳನ್ನು ನೀಡುವಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತಿರುವುದಾಗಿ ತಿಳಿಸಿದರು.

ABOUT THE AUTHOR

...view details