ಬೆಂಗಳೂರು:ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸೇರಿದ 6.17ಕೋಟಿ ರೂಪಾಯಿಯನ್ನ ಜಾರಿ ನಿರ್ದೇಶನಾಲಯ ಜಪ್ತಿಗೊಳಿಸಿದೆ. ಅಕ್ರಮವಾಗಿ ವಿದೇಶಿ ವಿನಿಮಯ ವ್ಯವಹಾರ ಹೊಂದಿದ್ದ ಆರೋಪದಡಿ ಕಂಪನಿಗಳಿಗೆ ಸೇರಿದ ವಿವಿಧ ವ್ಯಕ್ತಿಗಳ ಹೆಸರಿನ ಖಾತೆಯಲ್ಲಿದ್ದ ಹಣವನ್ನ ಜಪ್ತಿ ಮಾಡಲಾಗಿದೆ.
ಕೋವಿಡ್ ತುರ್ತು ಸಂದರ್ಭದಲ್ಲಿ ತಲೆ ಎತ್ತಿದ್ದ ವಿವಿಧ ಹೆಸರಿನ ಆ್ಯಪ್ ಆಧಾರಿತ ಮೈಕ್ರೋ ಫೈನಾನ್ಸ್ ಕಂಪನಿಗಳು ಹೂಡಿಕೆ, ಲೋನ್ ವ್ಯವಹಾರ ಆರಂಭಿಸಿದ್ದವು. ಬಹುತೇಕ ಕಂಪನಿಗಳು ಚೈನಾ ಮೂಲದ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದಲ್ಲದೇ, ರಿಕವರಿ ಸಂದರ್ಭದಲ್ಲಿ ನ್ಯಾಯಯುತವಲ್ಲದ ರೀತಿ ಗ್ರಾಹಕರನ್ನ ಬೆದರಿಸುತ್ತಿರುವ ಪ್ರಕರಣಗಳು ವರದಿಯಾಗಿದ್ದವು. ಬೆಂಗಳೂರಿನ ಮಹಾಲಕ್ಷ್ಮೀಪುರಂ, ಮಾರತ್ ಹಳ್ಳಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.