ಕರ್ನಾಟಕ

karnataka

ETV Bharat / city

ವಿಲೀನಕ್ಕೆ ನೌಕರರಿಂದ ವಿರೋಧ... 4 ದಿನ ಬ್ಯಾಂಕ್ ಸೇವೆ ಬಂದ್ - ವಿಲೀನಕ್ಕೆ ಬ್ಯಾಂಕ್​ ಒಕ್ಕೂಟ ವಿರೋಧ

ಬ್ಯಾಂಕ್‌ಗಳ ವಿಲೀನಕ್ಕೆ ಬ್ಯಾಂಕ್‌ಗಳ ನೌಕರರಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ದೇಶಾದ್ಯಂತ ಬ್ಯಾಂಕ್‌ಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದೆ. ಕರ್ನಾಟಕದಲ್ಲೂ ಬ್ಯಾಂಕ್‌ಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ. ಎಸ್​ಬಿಐ, ಕೆನರಾ, ಕರ್ನಾಟಕ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳಿಗೆ ಬೀಗ ಹಾಕಿ ಪ್ರತಿಭಟಿಸಲು ನಿರ್ಧರಿಸಲಾಗಿದೆ.

ಬ್ಯಾಂಕ್​ಗಳ ವಿಲೀನಕ್ಕೆ ನೌಕರರಿಂದ ವಿರೋಧ ...4 ದಿನ ಬ್ಯಾಂಕ್ ಸೇವೆ ಬಂದ್

By

Published : Sep 13, 2019, 2:35 PM IST

ಬೆಂಗಳೂರು:ಬ್ಯಾಂಕ್‌ಗಳ ವಿಲೀನಕ್ಕೆ ನೌಕರರಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ದೇಶಾದ್ಯಂತ ಬ್ಯಾಂಕ್‌ಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದ್ದು, ಕರ್ನಾಟಕದಲ್ಲೂ ಬ್ಯಾಂಕ್‌ಗಳು ಬಂದ್​ ಆಗಲಿವೆ. ಎಸ್​ಬಿಐ, ಕೆನರಾ, ಕರ್ನಾಟಕ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳಿಗೆ ಬೀಗ ಹಾಕಿ ಪ್ರತಿಭಟಿಸಲು ನಿರ್ಧರಿಸಲಾಗಿದೆ.

ಮುಷ್ಕರದ ಹಿನ್ನೆಲೆ, ATM ಹಾಗೂ ಬ್ಯಾಂಕ್ ಸೇವೆ ಸ್ಥಗಿತಗೊಳ್ಳಲಿದೆ. ಬೆಂಗಳೂರಿನ SBI ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದು, ಸೆ. 25ರ ಮಧ್ಯರಾತ್ರಿಯಿಂದ 27ರ ಮಧ್ಯರಾತ್ರಿಯವರೆಗೆ ಬ್ಯಾಂಕ್ ಸೇವೆ ಇರೋದಿಲ್ಲ.

ಇನ್ನು, 28 ರಂದು ನಾಲ್ಕನೇ ಶನಿವಾರ ಹಾಗೂ 29 ಭಾನುವಾರವಾಗಿರೋದ್ರಿಂದ ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆ ಸ್ಥಗಿತಗೊಳ್ಳಲಿದೆ. ಹೀಗಾಗಿ ಬ್ಯಾಂಕ್​ಗಳ ಯಾವುದೇ ಸೇವೆಗಳು ಸಾರ್ವಜನಿಕರಿಗೆ ಸಿಗುವುದಿಲ್ಲ.

ABOUT THE AUTHOR

...view details