ಬೆಂಗಳೂರು:ನಾಳೆ ನಡೆಯಲಿರುವ ಉಪಚುನಾವಣೆಗೆ ಮಹಾನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ ಎಂದು ಜಿಲ್ಲಾ ಚುನಾವಣಾ ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ಉಪಚುನಾವಣೆಗೆ ಸಕಲ ಸಿದ್ಧತೆ: ಬಿ.ಹೆಚ್. ಅನಿಲ್ ಕುಮಾರ್ - ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರ, ಕೆ.ಆರ್.ಪುರಂನ ಮಸ್ಟರಿಂಗ್ ಸೆಂಟರ್
ನಾಳೆ ನಡೆಯಲಿರುವ ಉಪಚುನಾವಣೆಗೆ ಮಹಾನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ ಎಂದು ಜಿಲ್ಲಾ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.

ನಾಳೆ ಬೆಳಗ್ಗೆ 7 ಗಂಟೆ ಯಿಂದ ಮತದಾನ ಪ್ರಕ್ರಿಯೆ ನಡೆಯುವ ಹಿನ್ನೆಲೆ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರ, ಕೆ.ಆರ್.ಪುರಂನ ಮಸ್ಟರಿಂಗ್ ಸೆಂಟರ್ ಗೆ ಚುನಾವಣಾ ಸಿಬ್ಬಂದಿ ಇಂದೇ ಹಾಜರಾಗಿದ್ದಾರೆ. ತಮ್ಮ ಕರ್ತವ್ಯಕ್ಕೆ ನೋಂದಣಿ ಮಾಡಿಕೊಂಡ ಚುನಾವಣಾ ಸಿಬ್ಬಂದಿ, ಮಸ್ಟರಿಂಗ್ ಸೆಂಟರ್ ನಿಂದ ಹೊರ ಹೋಗುವಂತಿಲ್ಲ. ಅಲ್ಲದೇ ಇವಿಎಂ ಪಡೆದು ಮಧ್ಯಾಹ್ನದ ನಂತರ ತಮಗೆ ಹಂಚಿಕೆಯಾದ ಮತಗಟ್ಟೆಗೆ ತೆರಳಬೇಕು. ನಾಳೆ ಚುನಾವಣೆ ಮುಗಿದ ಬಳಿಕ ವಾಪಸ್ ಸ್ಟ್ರಾಂಗ್ ರೂಂಗೆ ಇವಿಎಂಗಳನ್ನು ತಲುಪಿಸಿ, ಕರ್ತವ್ಯದಿಂದ ಹೋಗಬಹುದಾಗಿದೆ ಎಂದರು.
ಸಿಬ್ಬಂದಿ ಬೂತ್ ಗಳಿಗೆ ತೆರಳಲು ಬಸ್, ಮಿನಿ ಬಸ್, ಜೀಪ್ ಗಳ ವ್ಯವಸ್ಥೆ ಮಾಡಲಾಗಿದೆ. ಇವಿಎಂ ತೆಗೆದುಕೊಂಡು ಹೋಗಲು ಒಟ್ಟು 61 ವಾಹನಗಳ ವ್ಯವಸ್ಥೆ ಮಾಡಿದ್ದು ಇವಿಎಂ ಜೊತೆ ತೆರಳಲು ಪೊಲೀಸ್ ಸಿಬ್ಬಂದಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆ ನಡೆಸುತ್ತೇವೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದರು.