ಕರ್ನಾಟಕ

karnataka

ETV Bharat / city

ನಾಳೆ 'ಜನತಾ ನ್ಯಾಯಾಲಯ'ದ ತೀರ್ಪು: ಮತ ಎಣಿಕೆಗೆ ರಾಜ್ಯ ಚುನಾವಣಾ ಆಯೋಗ ರೆಡಿ - ಬೆಂಗಳೂರು ಮತ ಏಣಿಕೆ ತಯಾರಿ ಸುದ್ದಿ

ಉಪ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭ. ರಾಜ್ಯದಲ್ಲಿ ಅನರ್ಹ ಶಾಸಕರಷ್ಟೇ ಅಲ್ಲ, ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಅಳಿವು-ಉಳಿವು ಕೂಡಾ ನಾಳೆ ನಿರ್ಧಾರವಾಗಲಿದೆ. ಕಣದಲ್ಲಿರುವ 13 ಮಂದಿ ಅನರ್ಹ ಶಾಸಕರೂ ಸೇರಿದಂತೆ ಒಟ್ಟು 165 ಮಂದಿ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಮತ ಎಣಿಕಾ ಕಾರ್ಯಕ್ಕೆ ರಾಜ್ಯ ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಿದ್ದತೆಗಳನ್ನು ಮಾಡಿಕೊಂಡಿದೆ.

election commission
ಚುನಾವಣಾ ಆಯೋಗ

By

Published : Dec 8, 2019, 5:30 PM IST

ಬೆಂಗಳೂರು:ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಹಾಗು ಜೆಡಿಎಸ್ ಅಭ್ಯರ್ಥಿಗಳೂ ಸೇರಿದಂತೆ ಕಣದಲ್ಲಿರುವ ಒಟ್ಟು 165 ಅಭ್ಯರ್ಥಿಗಳ ಭವಿಷ್ಯ ನಾಳೆ ಬಹಿರಂಗಗೊಳ್ಳಲಿದ್ದು, ಮತಗಳ ಎಣಿಕೆಗೆ ಚುನಾವಣಾ ಆಯೋಗ ಎಲ್ಲಾ ರೀತಿಯ ಏರ್ಪಾಡುಗಳನ್ನು ಮಾಡಿದೆ.

15 ವಿಧಾನಸಭಾ ಕ್ಷೇತ್ರಗಳ ಮತಗಳ ಎಣಿಕೆಗೆ 11 ಎಣಿಕಾ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ರಿಟರ್ನಿಂಗ್ ಅಧಿಕಾರಿ, ಸಹಾಯಕ ರಿಟರ್ನಿಂಗ್ ಅಧಿಕಾರಿ ನೇಮಿಸಲಾಗಿದ್ದು, 240 ಮತ ಎಣಿಕೆ ಉಸ್ತುವಾರಿ, 240 ಮತ ಎಣಿಕೆ ಸಹಾಯಕ ಹಾಗೂ 240 ವೀಕ್ಷಕರನ್ನು ಚುನಾವಣಾ ಆಯೋಗ ನಿಯೋಜಿಸಿದೆ.

ಒಟ್ಟಾರೆ 213 ಟೇಬಲ್‌ಗಳಲ್ಲಿ ಕೌಂಟಿಂಗ್ ನಡೆಯುತ್ತೆ. ಯಶವಂತಪುರ ಕ್ಷೇತ್ರ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳ ಮತ ಎಣಿಕೆಗೆ 14 ಟೇಬಲ್‌ಗಳು, ಯಶವಂತಪುರಕ್ಕೆ ಮಾತ್ರ 21 ಟೇಬಲ್‌ಗಳಲ್ಲಿ ಕೌಂಟಿಂಗ್‌ ನಡೆಯಲಿದ್ದು 20 ಸುತ್ತುಗಳಲ್ಲಿ ಮತಗಳ ಎಣಿಕೆ ನಡೆಯಲಿದೆ.

ಎಲೆಕ್ಷನ್ ನಡೆದಿರುವ ಕ್ಷೇತ್ರಗಳಿಂದ 25,65,469 ಮತಗಳು ಚಲಾವಣೆಯಾಗಿದ್ದು, ಇದ್ರಲ್ಲಿ 808 ಅಂಚೆ ವೋಟ್‌ಗಳು ಸೇರಿವೆ. ಬೆಳಗ್ಗೆ 8 ಗಂಟೆಗೆ ಪ್ರಕ್ರಿಯೆ ಶುರುವಾಗಲಿದ್ದು, ಮೊದಲು ಅಂಚೆಗಳ ಮತ ಎಣಿಕೆ ನಡೆಸಲಾಗುತ್ತದೆ. ನಂತರ ಇವಿಎಂ ಯಂತ್ರಗಳಲ್ಲಿನ ಮತಗಳ ಲೆಕ್ಕ ನಡೆಯಲಿದೆ. ಪ್ರತಿ ಮತ ಎಣಿಕಾ ಕೇಂದ್ರದಲ್ಲಿಯೂ ಒಂದೊಂದು ವಿವಿಪ್ಯಾಟ್ ಹೊಂದಾಣಿಕೆ ಮಾಡುವ ವ್ಯವಸ್ಥೆಯಿದೆ.

ABOUT THE AUTHOR

...view details