ಕರ್ನಾಟಕ

karnataka

ETV Bharat / city

ಮಕ್ಕಳ ನಿರ್ಲಕ್ಷ್ಯಕ್ಕೆ ಮನನೊಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು.. ದೊಡ್ಡಬಳ್ಳಾಪುರದಲ್ಲಿ ದುರಂತ

ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲವೆಂಬ ನೋವಿನಲ್ಲಿದ್ದ ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ವೃದ್ಧ ದಂಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಕ್ಕಳ ನಿರ್ಲಕ್ಷ್ಯಕ್ಕೆ ಮನನೊಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು
ಮಕ್ಕಳ ನಿರ್ಲಕ್ಷ್ಯಕ್ಕೆ ಮನನೊಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು

By

Published : Sep 21, 2021, 1:56 PM IST

ದೊಡ್ಡಬಳ್ಳಾಪುರ: ಮಕ್ಕಳ ನಿರ್ಲಕ್ಷ್ಯಕ್ಕೆ ಮನನೊಂದು ವೃದ್ಧ ದಂಪತಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಹಾದ್ರೀಪುರ ಗ್ರಾಮದ ಮಾರೇಗೌಡ (62) ಮತ್ತು ಗಂಗಮ್ಮ (55) ಎಂದು ಗುರುತಿಸಲಾಗಿದೆ. ವೃದ್ಧ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ರಿಸರ್ವ್ ಪೊಲೀಸ್ ಇನ್ಸ್​​ಪೆಕ್ಟರ್ ಆಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಿರಿಯ ಮಗ ಹಾದ್ರೀಪುರ ಗ್ರಾಮದಲ್ಲೇ ಬೇರೊಂದು ಮನೆಯಲ್ಲಿ ವಾಸವಾಗಿದ್ದಾನೆ.

ಇದನ್ನೂ ಓದಿ:ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಯತ್ನ.. ಹಿರಿ ಮಗಳು ಸಾವು, ಕಿರಿ ಮಗಳು ಪಾರು

ಮಾರೇಗೌಡರು ವಿಶೇಷಚೇತನರಾಗಿದ್ದು ಗಂಗಮ್ಮನವರೇ ಆರೈಕೆ ಮಾಡುತ್ತಿದ್ದರು. ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲವೆಂಬ ನೋವು ಇಬ್ಬರನ್ನು ಕಾಡುತ್ತಿತ್ತು. ಇದರ ಮಧ್ಯೆ, ಕಿರಿಯ ಮಗ ತನ್ನ ಹೆಂಡತಿ ಮನೆಯವರಿಗೆ ಗೀಸರ್ ಕೊಡಿಸಿದ್ದನು. ಈ ವಿಚಾರಕ್ಕೆ ಸಂಬಂಧಿಸಿದಂತೆ ವೃದ್ಧ ದಂಪತಿ ಮತ್ತು ಆತನ ನಡುವೆ ಜಗಳವಾಗಿತ್ತು ಎನ್ನಲಾಗ್ತಿದೆ. ಇದರಿಂದ ಮನನೊಂದಿದ್ದ ದಂಪತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details