ಕರ್ನಾಟಕ

karnataka

ಜನೌಷಧ ಕೇಂದ್ರಗಳಲ್ಲಿ ಎಂಟು ಪೂರಕ ಪೌಷ್ಟಿಕಾಂಶದ ಆರೋಗ್ಯಕರ ಉತ್ಪನ್ನ ಬಿಡುಗಡೆ

By

Published : Sep 3, 2020, 7:45 PM IST

ಗುಣಮಟ್ಟದ ಜೆನೆರಿಕ್ ಮತ್ತು ಕೈಗೆಟುಕುವ ಔಷಧಿಗಳನ್ನು ಖರೀದಿಸಲು ಪ್ರತಿದಿನ ಸುಮಾರು ಒಂದು ಮಿಲಿಯನ್ ರೋಗಿಗಳು 6,500 ಜನೌಷಧಿ ಅಂಗಡಿಗಳಿಗೆ ಭೇಟಿ ನೀಡುತ್ತಾರೆ ಎಂದು ರಸಗೊಬ್ಬರ ಸಚಿವ ಸದಾನಂದ ಗೌಡ ಹೇಳಿದರು.

Eight Supplemental Nutritionally Healthy Product Release
ಆರೋಗ್ಯಕರ ಉತ್ಪನ್ನ ಬಿಡುಗಡೆ

ನವದೆಹಲಿ/ಬೆಂಗಳೂರು:ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳಲ್ಲಿ ಲಭ್ಯವಿರುವ ಅಗ್ಗದ ದರದ ಗುಣಮಟ್ಟದ ಔಷಧಗಳಿಂದ ದೇಶದ ಬಡ ಜನರಿಗೆ ಎರಡೂವರೆ ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಮಾಹಿತಿ ನೀಡಿದರು.

ಜನೌಷಧ ಕೇಂದ್ರಗಳಲ್ಲಿ ಎಂಟು ಪೂರಕ ಪೌಷ್ಟಿಕಾಂಶದ ಆರೋಗ್ಯಕರ ಉತ್ಪನ್ನಗಳನ್ನು ದೇಶಾದ್ಯಂತ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಸ್ತುತ ವೈದ್ಯರು ಕೂಡ ಜನೌಷಧಗಳ ಕುರಿತು ಸಲಹೆ ನೀಡುತ್ತಿದ್ದು, ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಪ್ರಯೋಜನವಾಗುತ್ತಿದೆ. ಈಗ ಬಿಡುಗಡೆ ಮಾಡಲಾಗಿರುವ 8 ಪ್ರಕಾರದ ಪೌಷ್ಟಿಕ ಔಷಧಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಒತ್ತು ನೀಡಲಾಗಿದೆ ಎಂದರು.

ಗುಣಮಟ್ಟದ ಜೆನೆರಿಕ್ ಮತ್ತು ಕೈಗೆಟುಕುವ ಔಷಧಿಗಳನ್ನು ಖರೀದಿಸಲು ಪ್ರತಿದಿನ ಸುಮಾರು ಒಂದು ಮಿಲಿಯನ್ ರೋಗಿಗಳು 6,500 ಜನೌಷಧ ಕೇಂದ್ರಗಳಿಗೆ ಭೇಟಿ ನೀಡುತ್ತಾರೆ‌. ಮಧುಮೇಹ ರಕ್ತದೊತ್ತಡ, ಸೈಕೋಟ್ರೋಪಿಕ್ ಮುಂತಾದ ದೀರ್ಘಕಾಲದ ಕಾಯಿಲೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳಬೇಕಾದ ರೋಗಿಗಳಿಗೆ ಈ ಯೋಜನೆ ವರದಾನವಾಗುತ್ತಿದೆ. ಮಹಿಳೆಯರ ಸುರಕ್ಷಿತ ಅವಧಿಗಳಿಗೆ ಸುವಿಧಾ ಸ್ಕೀಮ್ ಹೆಸರಿನ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಪ್ರತಿ ಪ್ಯಾಡ್​​​ಗೆ 1 ರೂ. ದರದಲ್ಲಿ ನೀಡಲಾಗುತ್ತಿದೆ ಎಂದರು.

ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿ, ಜೆನರಿಕ್ ಔಷಧಿಗಳು ಅನುಪಾತವು ಈಗ ಹೆಚ್ಚಾಗಿದೆ. ಪೋಷಕಾಂಶ ಆಧಾರಿತ ಉತ್ಪನ್ನಗಳು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಕೊರೊನಾ ಸಮಯದಲ್ಲಿ ಇದು ಮಹತ್ವದ್ದಾಗಿದೆ ಎಂದು ಗಮನಸೆಳೆದರು.

ABOUT THE AUTHOR

...view details