ಕರ್ನಾಟಕ

karnataka

ETV Bharat / city

ಎಸ್ಎಸ್ಎಲ್​ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಗೈರು.. ಶಿಕ್ಷಣ ಸಚಿವರು ಹೇಳಿದ್ದೇನು? - SSLC Exam

ಎಸ್ಎಸ್ಎಲ್​ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಗೈರು ಹಾಜರಾಗುತ್ತಿದ್ದಾರೆ. ಆದರೆ ಈ ಗೈರು ಹಾಜರಾತಿಗೂ ಹಿಜಾಬ್ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

education minister b c nagesh speaks on SSLC Exam
ಶಿಕ್ಷಣ ಸಚಿವ ಬಿ.ಸಿ ನಾಗೇಶ್

By

Published : Apr 6, 2022, 6:08 PM IST

ಬೆಂಗಳೂರು: ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಯುತ್ತಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚು ವಿದ್ಯಾರ್ಥಿಗಳು ಗೈರು ಹಾಜರಾಗುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನಿಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಹಿಜಾಬ್​ ವಿಚಾರವಾಗಿ ಹೆಚ್ಚು ಗೈರು ಆಗಿಲ್ಲ. ಖಾಸಗಿ ಅಭ್ಯರ್ಥಿಗಳು ಹೆಚ್ಚಾಗಿ ಪರೀಕ್ಷೆಗೆ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಕಳೆದ ವರ್ಷದಂತೆ ಈ ವರ್ಷವೂ ಪಾಸ್ ಮಾಡುತ್ತಾರೆಂದು ಕೆಲವರು ಅಂದುಕೊಂಡಿದ್ರು. ಕೋವಿಡ್ ಇರುತ್ತೆ, ಪರೀಕ್ಷೆ ಇರೋಲ್ಲ, ಹಾಗೇ ಪಾಸ್ ಮಾಡುವ ನಿರೀಕ್ಷೆಯಲ್ಲಿ ಇದ್ದರು. ಇಲಾಖೆಗೂ ಸಾಕಷ್ಟು ಕರೆಗಳು ಬಂದಿದ್ದವು. ರೆಗ್ಯುಲರ್ ಕ್ಲಾಸ್ ಸರಿಯಾಗಿ ಆಗಿಲ್ಲ ಅಂತ ಹೇಳ್ತಿದ್ದರು. ಹೀಗಾಗಿ ಖಾಸಗಿ ಅಭ್ಯರ್ಥಿಗಳು ಹೆಚ್ಚು ಗೈರಾಗಿದ್ದಾರೆ ಅಷ್ಟೇ. ಆದರೆ ಈ ಗೈರು ಹಾಜರಾತಿಗೂ ಹಿಜಾಬ್ ವಿಚಾರಕ್ಕೂ ಸಂಬಂಧ ಇಲ್ಲ. ಈ ಕಾರಣಕ್ಕೆ ಯಾರು ಗೈರಾಗಿಲ್ಲವೆಂದು ಸ್ಪಷ್ಟಪಡಿಸಿದರು.‌

ಇದನ್ನೂ ಓದಿ:ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಸಚಿವರು ಮತ್ತೇ ಎಡವಟ್ಟು ಮಾಡಿಕೊಂಡ್ರಾ..?

ರಾಜ್ಯದಲ್ಲಿಂದು ನಡೆದ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ 24,873 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 8,70,429 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ 8,45,556 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮ, ಅವ್ಯವಹಾರದಲ್ಲಿ ಭಾಗಿಯಾಗಿರುವುದು ವರದಿಯಾಗಿಲ್ಲ. ಹಾಗೆಯೇ ಯಾವುದೇ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿಲ್ಲ ಎಂದು ಮಾಹಿತಿ ನೀಡಿದರು.

  • ಮೊದಲ ಬಾರಿಗೆ ಹಾಜರಾದ ವಿದ್ಯಾರ್ಥಿಗಳು- 8,05,654.
  • ಖಾಸಗಿ ಅಭ್ಯರ್ಥಿಗಳು- 37,393.
  • ಪುನರಾವರ್ತಿತ ವಿದ್ಯಾರ್ಥಿಗಳು- 2,509.
  • ಅನಾರೋಗ್ಯ ಹಿನ್ನೆಲೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದವರು- 296 ವಿದ್ಯಾರ್ಥಿಗಳು.

ABOUT THE AUTHOR

...view details