ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆಯಾಯ್ತು ಎನ್ನುವಾಗಲೇ ಒಮಿಕ್ರಾನ್ ರೂಪದಲ್ಲಿ 3ನೇ ಅಲೆ ಆರ್ಭಟ ಜೋರಾಗಿದೆ. ಸೋಂಕು ಹರಡುವಿಕೆ ನಿಯಂತ್ರಿಸಲು ನಿತ್ಯ 2 ಲಕ್ಷದಷ್ಟು ಕೋವಿಡ್ ಟೆಸ್ಟ್ ನಡೆಸಲಾಗ್ತಿದೆ.
ಅಷ್ಟೇ ಅಲ್ಲ, ಇನ್ಮುಂದೆ ಕೋವಿಡ್ ಟೆಸ್ಟ್ ಮಾಡಿಸಿ ರಿಸಲ್ಟ್ ಮೆಸೇಜ್ಗಾಗಿ ಕಾಯುವ ಅವಶ್ಯಕತೆ ಇಲ್ಲ. ಐಸಿಎಂಆರ್ ಪೋರ್ಟಲ್ಗೆ ಹೋದ್ರೆ ಸುಲಭವಾಗಿ ನಿಮ್ಮ ಕೋವಿಡ್ ಟೆಸ್ಟ್ ರಿಪೋರ್ಟ್ ಪಡೆಯಬಹುದು.
ಈ ಹಿಂದೆ ಕೋವಿಡ್ ಟೆಸ್ಟ್ ಮಾಡಿಸಿದಾಗ ಕೆಲವರಿಗೆ ಮೊಬೈಲ್ ಸಂಖ್ಯೆಗೆ ಸಂದೇಶ ಬಂದರೆ ಇನ್ನು ಕೆಲವರಿಗೆ ತಾಂತ್ರಿಕ ಕಾರಣದಿಂದ ಸಂದೇಶ ರವಾನೆ ಆಗಿರುತ್ತಿರಲಿಲ್ಲ. ಆದರೆ, ಇನ್ಮುಂದೆ ಹಾಗಾಗುವುದಿಲ್ಲ. ಕೋವಿಡ್ ಟೆಸ್ಟ್ ಮಾಡಿಸಿದ್ರೆ ನೀವು ಐಸಿಎಂಆರ್ ಪೋರ್ಟಲ್ಗೆ ಹೋಗಿ ಟೆಸ್ಟ್ ರಿಪೋರ್ಟ್ ಪಡೆಯಬಹುದು.
ಮೊದಲ ಹಾಗೂ 2ನೇ ಅಲೆ ಸೇರಿದಂತೆ ನೀವೂ ಈತನಕ ಎಷ್ಟು ಸಲ ಕೋವಿಡ್ ಟೆಸ್ಟ್ ಮಾಡಿಸಿದ್ದಿರೋ ಅದೆಲ್ಲದರ ರಿಸಲ್ಟ್ ಕೂಡ ನೋಡಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ.. https:/report.icmr.org.in/index.php ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಸಾಕು ಪೇಜ್ ಓಪನ್ ಆಗುತ್ತೆ. ಕೋವಿಡ್ ಟೆಸ್ಟ್ ವೇಳೆ ನೀವು ನೀಡಿರುವ ಮೊಬೈಲ್ ನಂಬರ್‌ನ ಟೈಪ್ ಮಾಡಿದರೆ ಆ ಸಂಖ್ಯೆಗೆ ಒಟಿಪಿ ನಂಬರ್ ಬರಲಿದೆ.
ಆ ನಂಬರ್ ನಮೂದಿಸಿದ್ರೆ ನಿಮಗೆ ಪಿಡಿಎಫ್ ಮಾದರಿಯಲ್ಲಿ ಕೋವಿಡ್ ರಿಪೋರ್ಟ್ ಸಿಗಲಿದೆ. ಹಾಗೆಯೇ, ಅದನ್ನ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ. ರಾಜ್ಯದ ಎಲ್ಲ ಲ್ಯಾಬ್‌ಗಳಿಗೂ 24 ಗಂಟೆಯೊಳಗೆ ಕೋವಿಡ್ ರಿಪೋರ್ಟ್ ನೀಡಲು ಸೂಚಿಸಿರುವುದರಿಂದ ನಿಮ್ಮ ಪಾಸಿಟಿವ್/ನೆಗಟಿವ್ ವರದಿಯನ್ನ ಐಸಿಎಂಆರ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗಿರುತ್ತದೆ.