ಬೆಂಗಳೂರು:ಕೃಷಿ ಉತ್ಪನ್ನಗಳ ಮಾರಾಟಕ್ಕೆ ಇ-ಕಾಮರ್ಸ್ ವೇದಿಕೆಯಲ್ಲಿ ಅವಕಾಶ ದೊರೆಯಬೇಕು ಹಾಗೂ ಇದರ ನೇರ ಲಾಭ ಉತ್ಪಾದಕರಿಗೆ ದೊರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಗೃಹ ಕಚೇರಿ ಕೃಷ್ಣಾದಲ್ಲಿ ಫ್ಲಿಪ್ ಕಾರ್ಟ್ ಸಂಸ್ಥೆಯ ರಜನೀಶ್ ಕುಮಾರ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಸಿಎಂ ಚರ್ಚಿಸಿದರು. ಫ್ಲಿಪ್ ಕಾರ್ಟ್ ಸಂಸ್ಥೆಯು ರಾಜ್ಯದಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿರುವುದಲ್ಲದೆ, ರೈತರು, ಸಣ್ಣ ಉತ್ಪಾದಕರಿಗೆ, ಕರಕುಶಲ ವಸ್ತುಗಳ ವ್ಯಾಪಾರಕ್ಕೆ ಅವಕಾಶ ಒದಗಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಸಿಎಂ, ರೈತರಿಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯೊಂದಿಗೆ ಇ-ಕಾಮರ್ಸ್ ವೇದಿಕೆ ಮೂಲಕ ಮಾರುಕಟ್ಟೆಯ ಬೇಡಿಕೆಗಳ ಕುರಿತು ಮಾಹಿತಿಯೂ ದೊರೆಯುವಂತಿರಬೇಕು. ಇದರಿಂದ ಅವರಿಗೆ ಅನುಕೂಲವಾಗುವುದು ಎಂದರು.