ಬೆಂಗಳೂರು: ಚಿಕ್ಕಮಗಳೂರು ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುವಂತೆ ಆಗ್ರಹಿಸಿ ಇದೇ ತಿಂಗಳ 13 ರಂದು ದತ್ತ ಮಾಲಾ ಅಭಿಯಾನವನ್ನು ಶಂಕರಮಠದ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ದತ್ತಪೀಠ ಹಿಂದೂಗಳಿಗೆ ಒಪ್ಪಿಸುವಂತೆ ಆಗ್ರಹಿಸಿ ಅ.13 ರಂದು ದತ್ತಮಾಲಾ ಅಭಿಯಾನ - Dattapeet
ಚಿಕ್ಕಮಗಳೂರು ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುವಂತೆ ಆಗ್ರಹಿಸಿ ಇದೇ ತಿಂಗಳ 13 ರಂದು ದತ್ತ ಮಾಲಾ ಅಭಿಯಾನವನ್ನು ಶಂಕರಮಠದ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ 'ಚಂದ್ರದ್ರೋಣ' ಪರ್ವತ ಶ್ರೀಗುರು ದತ್ತಾತ್ರೇಯ, ತಾಯಿ ಅರುಂಧತಿ, ಅತ್ರಿ ಋಷಿಗಳ ಪವಿತ್ರ ತಪೋಭೂಮಿ. ಆದರೆ ಕೆಲವು ಆಕ್ರಮಣಕಾರರು ಈ ಪವಿತ್ರ ಸ್ಥಳ ಆಕ್ರಮಿಸಿಕೊಂಡು 'ಬಾಬಾಬುಡನ್' ಎಂದು ಹೇಳುತ್ತಿರುವುದು ಅತ್ಯಂತ ಖಂಡನೀಯ. ಹಿಂದುಗಳ ತಾಳ್ಮೆ ಪರೀಕ್ಷಿಸದೇ, ತಕ್ಷಣ ಈ ಪೀಠವನ್ನು ಹಸ್ತಾಂತರಿಸಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರು ನಗರದಿಂದ 12 ರಂದು 500 ಮಂದಿ ದತ್ತಮಾಲಾಧಾರಿಗಳು ಚಿಕ್ಕಮಗಳೂರಿಗೆ ಹೊರಡಲಿದ್ದಾರೆ. ಯಡಿಯೂರಪ್ಪ ಅವರಿಗೆ ದತ್ತಪೀಠದ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಅವರ ಅವಧಿಯಲ್ಲೇ ಹಿಂದೂಗಳಿಗೆ ಒಪ್ಪಿಸುವ ಕಾರ್ಯ ನಡೆಯಬೇಕು. ದತ್ತಪೀಠವನ್ನು ಸಂಪೂರ್ಣ ಹಿಂದುಗಳಿಗೆ ಒಪ್ಪಿಸಬೇಕು. ಅಲ್ಲಿರುವ ಅನಧಿಕೃತ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು, ಹಿಂದೂ ಅರ್ಚಕರನ್ನು ನೇಮಿಸಬೇಕು, ತ್ರಿಕಾಲ ಪೂಜೆ ನಡೆಯಬೇಕು ಹಾಗೂ ಉರೂಸ್ ನಿಲ್ಲಬೇಕು, ಪೀಠದ ನೂರಾರು ಎಕರೆ ಅತಿಕ್ರಮಣ ತೆರವುಗೊಳಿಸಬೇಕು ಹಾಗೂ ಅಮೂಲ್ಯ ವಸ್ತುಗಳು ಕಣ್ಮರೆಯಾದ ಬಗ್ಗೆ ತನಿಖೆ ನಡೆಸಬೇಕು. ಭಕ್ತರಿಗೆ ಅಡೆತಡೆ ಇಲ್ಲದೇ ದರ್ಶನ, ಪೂಜೆಗೆ ಮುಕ್ತ ಅವಕಾಶ ನೀಡಬೇಕು. ಭಕ್ತರಿಗೆ ಉಚಿತ ಅನ್ನದಾನ ವ್ಯವಸ್ಥೆ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ರು.