ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿವಾಗಿ ದುರ್ಗಾ ಪೂಜೆ ಆಚರಣೆಗೆ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಮಾರ್ಪಾಡು ಮಾಡಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಂಗಳವಾರ ಹೊರಡಿಸಿದ ಆದೇಶದಲ್ಲಿ ದುರ್ಗಾ ಪೂಜಾ ಸಂಘದ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಆದೇಶದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದ್ದಾರೆ.
ಮಾರ್ಗಸೂಚಿಯಲ್ಲಿ ಮಾರ್ಪಾಡು:
ದುರ್ಗಾ ಪೂಜೆ ಆಚರಣೆ: ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಬಿಎಂಪಿ - ದುರ್ಗಾ ಪೂಜೆ ಆಚರಣೆ ಮಾರ್ಗಸೂಚಿ ಬದಲಾವಣೆ
ದುರ್ಗಾ ಪೂಜಾ ಸಂಘದ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ದುರ್ಗಾ ಪೂಜೆ ಆಚರಣೆಗೆ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಿ ಬಿಬಿಎಂಪಿ ಆದೇಶಿಸಿದೆ.
• ಸಾರ್ವಜನಿಕ ಸ್ಥಳಗಳಲ್ಲಿ ದುರ್ಗಾ ಮೂರ್ತಿಗಳ 4 ಅಡಿ ಎತ್ತರ ನಿರ್ಬಂಧ ತೆಗೆಯಲಾಗಿದೆ.
• ಪುಷ್ಪಾಂಜಲಿ ಮತ್ತು ಸಂಧಿ ಪೂಜೆ ವೇಳೆ ಕೋವಿಡ್ ನಿಯಮಗಳನ್ನು ಅನುಸರಿಸಿಕೊಂಡು 50 ಜನರಿಗೆ ಹಂತ-ಹಂತವಾಗಿ ಬರಲು ಅವಕಾಶ ಕಲ್ಪಿಸಿದ್ದು, ಹಂತ-ಹಂತವಾಗಿ ಬರುವ ಒಟ್ಟು ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲ.
• ಅವಶ್ಯಕತೆ ಅನುಸಾರ ಒಂದು ವಾರ್ಡಿಗೆ ಅನೇಕ ಮೂರ್ತಿಗಳನ್ನು ಇಡಲು ಅವಕಾಶ ಕಲ್ಪಿಸಿದ್ದು, ವಲಯ ಜಂಟಿ ಆಯುಕ್ತರು ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು.
• ಪ್ರಾರ್ಥನಾ ಸಮಯದಲ್ಲಿ ಸಾಂಪ್ರದಾಯಿಕ ವಾದ್ಯಗಳಿಗೆ (ಡಾಕ್ ಮತ್ತು ಡೋಲ್) ಅನುಮತಿ ನೀಡಲಾಗಿದೆ.
• ಇನ್ನುಳಿದ ವಿಷಯಗಳ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶದಂತೆ ಷರತ್ತುಗಳನ್ನು ಪಾಲಿಸಬೇಕೆಂದು ತಿಳಿಸಲಾಗಿದೆ.
(ದುರ್ಗಾಪೂಜೆಗೆ ಬಿಬಿಎಂಪಿ ಪ್ರತ್ಯೇಕ ಮಾರ್ಗಸೂಚಿ: ಸಾರ್ವಜನಿಕ ಸ್ಥಳಗಳಲ್ಲಿ 5 ದಿನ ಪೂಜೆಗೆ ಅವಕಾಶ)