ಕರ್ನಾಟಕ

karnataka

ETV Bharat / city

ಪಕ್ಷ ಬೇರುಮಟ್ಟದಿಂದ ಬಲಪಡಿಸಲು ಆರೋಗ್ಯ ಹಸ್ತ ಸಹಕಾರಿ - ಆರ್‌ ಧೃವನಾರಾಯಣ್ ವಿಶ್ವಾಸ - ಕ್ವೀನ್ ಸಂಸ್ಥೆ

ಅರ್ಹತೆ ಆಧರಿಸಿ ಮುಂದಿನ ದಿನಗಳಲ್ಲಿ ಪಕ್ಷದ ಸ್ಥಾನಮಾನಗಳ ಅವಕಾಶ ಲಭಿಸಲಿದೆ. ಪಕ್ಷವನ್ನು ಕೇಡರ್ ಮಾದರಿ ಸಂಘಟಿಸುವ ಪ್ರಯತ್ನದಲ್ಲಿ ಡಿಕೆಶಿ ತೊಡಗಿದ್ದು, ಅವರ ಆಶಯಕ್ಕೆ ತಮ್ಮ ಸಹಕಾರ ಬೇಕು..

health review program
ಆರೋಗ್ಯ ಹಸ್ತ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ದೃವನಾರಾಯಣ್

By

Published : Sep 8, 2020, 9:17 PM IST

ಬೆಂಗಳೂರು :ಆರೋಗ್ಯ ಹಸ್ತ ಯೋಜನೆಯ ಮುಖ್ಯಸ್ಥ ಹಾಗೂ ಮಾಜಿ ಸಂಸದ ಧೃವನಾರಾಯಣ್ ಇಂದು ಝೂಮ್ ಆ್ಯಪ್​​ ಮೂಲಕ ವಿವಿಧ ವಿಭಾಗಗಳ ಸಂಚಾಲಕರ ಜೊತೆ ಆರೋಗ್ಯ ಹಸ್ತ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮದ ಪ್ರಗತಿ ಯಾವ ರೀತಿ ಇದೆ ಎಂಬುದನ್ನು ಚರ್ಚಿಸಲಾಯಿತು. ಆಯಾ ಭಾಗಗಳಲ್ಲಿ ಈಗಾಗಲೇ ಉಸ್ತುವಾರಿಗಳನ್ನು ನೇಮಿಸಿದ್ದು, ಅವರ ಮೂಲಕ ಪ್ರಗತಿಯ ವಿವರ ಪಡೆಯಲಾಯಿತು.

ಆರೋಗ್ಯ ಹಸ್ತ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ

ಕಳೆದ ಎರಡು ತಿಂಗಳಿಂದ ಕಾಂಗ್ರೆಸ್ ಪಕ್ಷದಿಂದ ವಿತರಿಸಲಾಗುತ್ತಿರುವ ಆರೋಗ್ಯ ಹಸ್ತ ಕಿಟ್​​ ಬಳಕೆ ಹೇಗಿದೆ? ಪಕ್ಷದ ಅತ್ಯಂತ ಪ್ರಮುಖ ಹಾಗೂ ಗಂಭೀರ ಕಾರ್ಯಕ್ರಮ ಇದಾಗಿದ್ದು ಯಶಸ್ಸು ಪಕ್ಷಕ್ಕೆ ಅನಿವಾರ್ಯವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಹಾಗೂ ಕನಸಿನ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮ ಯಶಸ್ವಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಶತಾಯಗತಾಯ ಕಾರ್ಯಕ್ರಮ ಯಶಸ್ವಿಗೊಳಿಸಲು ಇದರ ಉಸ್ತುವಾರಿ ಹೊತ್ತವರು ಶ್ರಮಿಸಬೇಕು.

ಈ ಕಾರ್ಯಕ್ರಮದ ಮೂಲಕ ಜನರನ್ನು ತಲುಪುವ ಸದಾಶಯ ಹೊಂದಲಾಗಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ರಾಜ್ಯದ ಮೂಲೆ ಮೂಲೆಗೂ ಈ ಕಾರ್ಯಕ್ರಮ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಯಾವುದೇ ರೀತಿಯಲ್ಲಿ ಏನೇ ಸಮಸ್ಯೆ ಎದುರಾದ್ರೂ ಪಕ್ಷದ ಮುಖಂಡರ ಗಮನಕ್ಕೆ ತನ್ನಿ. ಕಾರ್ಯಕ್ರಮವನ್ನು ಜನರಿಗೆ ತಲುಪಿಸಲು ಯಾವುದೇ ರೀತಿಯ ಸಹಕಾರವನ್ನು ಪಕ್ಷ ನಿಮಗೆ ನೀಡಲಿದೆ.

ಈ ಕಾರ್ಯಕ್ರಮ ಘೋಷಣೆಗೂ ಮುನ್ನವೇ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಿರುವ ಡಿ ಕೆ ಶಿವಕುಮಾರ್ ಅವರು ವಿಧಾನಸಭಾ ಕ್ಷೇತ್ರವಾರು ಸಂಚಾಲಕರನ್ನು ನೇಮಿಸಿದ್ದಾರೆ. ಪ್ರತಿಯೊಬ್ಬರೂ ಅತ್ಯಂತ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ವಿಶ್ವಾಸ ನಮ್ಮದು ಎಂದರು.

ಯಾರಾದ್ರೂ ನಿರೀಕ್ಷಿತ ಆಸಕ್ತಿ ತೋರಿಸುತ್ತಿಲ್ಲ ಎಂದಾದರೆ ಅದನ್ನು ಪಕ್ಷದ ಸ್ಥಳೀಯ ಮುಖಂಡರ ಗಮನಕ್ಕೆ ತನ್ನಿ. ಅವರ ಮೂಲಕ ಪಕ್ಷದ ರಾಜ್ಯ ಕಚೇರಿಗೆ ಮಾಹಿತಿ ರವಾನೆಯಾಗಲಿದೆ. ಈ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಪಕ್ಷದ ವಿವಿಧ ಸಮಿತಿಗಳ ನೇಮಕ ಸಂದರ್ಭ ಪರಿಗಣಿಸಲಾಗುವುದು.

ಅರ್ಹತೆ ಆಧರಿಸಿ ಮುಂದಿನ ದಿನಗಳಲ್ಲಿ ಪಕ್ಷದ ಸ್ಥಾನಮಾನಗಳ ಅವಕಾಶ ಲಭಿಸಲಿದೆ. ಪಕ್ಷವನ್ನು ಕೇಡರ್ ಮಾದರಿ ಸಂಘಟಿಸುವ ಪ್ರಯತ್ನದಲ್ಲಿ ಡಿಕೆಶಿ ತೊಡಗಿದ್ದು, ಅವರ ಆಶಯಕ್ಕೆ ತಮ್ಮ ಸಹಕಾರ ಬೇಕು ಎಂದು ವಿಭಾಗವಾರು ಸಂಚಾಲಕರಿಗೆ ಆರೋಗ್ಯ ಹಸ್ತ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಆರ್‌ ಧೃವನಾರಾಯಣ್ ಮನವಿ ಮಾಡಿದರು.

ABOUT THE AUTHOR

...view details