ನೆಲಮಂಗಲ(ಬೆಂಗಳೂರು) :ಇಬ್ಬರು ಸ್ನೇಹಿತರು ಬೆಳಗ್ಗೆಯಿಂದ ರಾತ್ರಿ 7 ಗಂಟೆಯವರೆಗೂ ಕುಡಿದಿದ್ದಾರೆ. ಇಬ್ಬರ ಡ್ರಿಂಕ್ಸ್ ಪಾರ್ಟಿ ವಿಕೋಪಕ್ಕೆ ತಿರುಗಿದೆ. ಇದ್ದಕ್ಕಿದ್ದಂತೆ ಆಡುಗೆ ಮನೆಯಿಂದ ಚಾಕು ತಂದು ಸ್ನೇಹಿತನ ಕತ್ತು ಕೊಯ್ದ ಗೆಳೆಯ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸಿದ್ದನಹೊಸಹಳ್ಳಿಯಲ್ಲಿ ನಡೆದಿದೆ.
ಘಟನೆಯಲ್ಲಿ ಲಾರಿ ಮೆಕ್ಯಾನಿಕ್ ಪ್ರಶಾಂತ್ ಸ್ನೇಹಿತನಿಂದ ನಡೆದ ಕೊಲೆ ಯತ್ನದಲ್ಲಿ ಬಚಾವ್ ಆಗಿದ್ದಾನೆ. ಕೊಲೆ ಯತ್ನ ನಡೆಸಿದ ಸತೀಶ್ ಘಟನೆ ನಂತರ ಪರಾರಿಯಾಗಿದ್ದಾನೆ.
ಲಾರಿ ಮೆಕ್ಯಾನಿಕ್ ಪ್ರಶಾಂತ್ ಮತ್ತು ಆಟೋ ಡ್ರೈವರ್ ಸತೀಶ್ 4 ತಿಂಗಳಿನಿಂದ ಸ್ನೇಹಿತರು. ಜನವರಿ 31ರಂದು ಸತೀಶ್ ಮದ್ಯಪಾನ ಮಾಡಲು ಪ್ರಶಾಂತ್ ಮನೆಗೆ ಬಂದಿದ್ದಾನೆ. ಬೆಳಗ್ಗೆ 11ಗಂಟೆಗೆ ಶುರುವಾದ ಇಬ್ಬರ ಎಣ್ಣೆ ಪಾರ್ಟಿ ರಾತ್ರಿ 7 ಗಂಟೆಯವರೆಗೂ ಮುಂದುವರಿದಿದೆ.