ಕರ್ನಾಟಕ

karnataka

ETV Bharat / city

ಡ್ರಿಂಕ್ ಆ್ಯಂಡ್ ಡ್ರೈವ್‌: ಒಂದೇ ದಿನ 1,169 ಸವಾರರ ವಿರುದ್ಧ ಕೇಸ್ - city police commissioner Alok kumar

ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ನಗರ ಪೊಲೀಸ್​ ಆಯುಕ್ತರ ಸೂಚನೆಯ ಮೇರೆಗೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Traffic police Bangalore city

By

Published : Jul 28, 2019, 4:53 PM IST

ಬೆಂಗಳೂರು:ಪ್ರತಿ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಸಂಚಾರ ಪೊಲೀಸರು ಶನಿವಾರ ರಾತ್ರಿ ನಗರದೆಲ್ಲೆಡೆ ಮದ್ಯ ಸೇವಿಸಿ ವಾಹನ ಚಾಲನೆ, ಟ್ರಾಪಿಕ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ 1,169 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ವೀಕೆಂಡ್‍ ವೇಳೆ ಮದ್ಯ ಸೇವಿಸಿ ವಾಹನ ಚಲಾಯಿಸಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಘಟನೆಗಳಲ್ಲಿ ಬಲಿಯಾಗುತ್ತಿರುವ ಬಹುತೇಕರು ಯುವಕರೇ ಆಗಿದ್ದಾರೆ. ಈ ಪ್ರಕರಣಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಗರ ಪೊಲೀಸ್​ ಆಯುಕ್ತರು ವಾರಾಂತ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಆದೇಶಿಸಿದ್ದಾರೆ.

ಕಳೆದ ರಾತ್ರಿ ಸ್ವತ: ಪೊಲೀಸ್​ ಕಮೀಷನರ್​ ಅಲೋಕ್​ ಕುಮಾರ್​ ಅವರೇ ಖುದ್ದು ಫೀಲ್ಡ್​ಗಿಳಿದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಇದೇ ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್​ ಆಯುಕ್ತ ಪಿ.ಹರಿಶೇಖರನ್​ ನೇತೃತ್ವದಲ್ಲಿ ನಗರದ 44 ಸಂಚಾರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕುಡಿದು ವಾಹನ ಚಲಾಯಿಸುತ್ತಿದ್ದ 1,169 ಸವಾರರ ವಿರುದ್ಧ ಡ್ರಿಂಕ್​ ಅಂಡ್​ ಡ್ರೈವ್​ ಕೇಸ್​ ದಾಖಲಿಸಿದ್ದಾರೆ. ಇದೇ ವೇಳೆ ಡಿಸ್​ ಪ್ಲೇ ಕಾರ್ಡ್​ ಇಲ್ಲದ 63 ಆಟೊ ಜಪ್ತಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details