ಕರ್ನಾಟಕ

karnataka

ETV Bharat / city

ಅಂತಾರಾಜ್ಯ ಗಾಂಜಾ ಸರಬರಾಜುಗಾರನ ಬಂಧನ - ಆದೀಲ್ ಹಮೀದ್ ಶೇಕ್ ಬಂಧಿತ ಆರೋಪಿ.

ವಿಚಾರಣೆ ವೇಳೆ‌ ಕಾಲೇಜು ಮತ್ತು ಯುವಕ-ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಈ ಗಾಂಜಾ ಮಾರಾಟ ಮಾಡುತ್ತಿದ್ದು, ಈ ಹಿಂದೆ ಕೆಲವು ಸ್ಥಳೀಯ ಗಾಂಜಾ ವ್ಯಾಪಾರಿಗಳಿಗೆ ಮಾರಾಟ ಮಾಡಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ..

drugs dealer arrested
ಅಂತರ್ ರಾಜ್ಯ ಗಾಂಜಾ ಸರಬರಾಜುಗಾರನ ಬಂಧನ

By

Published : Apr 15, 2022, 10:40 AM IST

ಬೆಂಗಳೂರು :ಭರ್ಜರಿ ಕಾರ್ಯಾಚರಣೆ ನಡೆಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಅಂತಾರಾಜ್ಯ ಗಾಂಜಾ ಸರಬರಾಜುಗಾರನನ್ನು ಬಂಧಿಸಿ 12 ಲಕ್ಷ ಮೌಲ್ಯದ 40 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಮಹಾರಾಷ್ಟ್ರ ಮೂಲದ ಆದೀಲ್ ಹಮೀದ್ ಶೇಕ್ ಬಂಧಿತ ಆರೋಪಿ. ಹೊರ ರಾಜ್ಯಗಳಿಂದ ಗಾಂಜಾ ತರುತ್ತಿದ್ದ ಆರೋಪಿ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದನು.

ಕುಮಾರಸ್ವಾಮಿಲೇಔಟ್​ನ ಕೆಂಪೇಗೌಡ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುವಾಗ ಖಚಿತ ಮಾಹಿತಿ ಮೇರೆಗೆ ಇನ್​ಸ್ಪೆಕ್ಟರ್​ ಶಿವಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ‌ ಕಾಲೇಜು ಮತ್ತು ಯುವಕ-ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಈ ಗಾಂಜಾ ಮಾರಾಟ ಮಾಡುತ್ತಿದ್ದು, ಈ ಹಿಂದೆ ಕೆಲವು ಸ್ಥಳೀಯ ಗಾಂಜಾ ವ್ಯಾಪಾರಿಗಳಿಗೆ ಮಾರಾಟ ಮಾಡಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ.

ಇದನ್ನೂ ಓದಿ:ಪ್ರಿಯಕರನ ಜೊತೆ ಮದುವೆಗೆ ಒತ್ತಾಯ; ಮರ್ಯಾದೆಗಂಜಿ ಸಹೋದರಿಯನ್ನೇ ಕೊಂದ ಅಣ್ಣ!

ABOUT THE AUTHOR

...view details