ಬೆಂಗಳೂರು : ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ನೈಜೀರಿಯನ್ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚಿಮಾ ಅಜೋಕು ಎಂದು ಗುರುತಿಸಲಾಗಿದೆ. ಆರೋಪಿಯು ಮುಂಬೈನಿಂದ ಮಾದಕ ಕ್ರಿಸ್ಟಲ್ಸ್ ಗಳನ್ನು ಖರೀದಿಸಿ ಬೆಂಗಳೂರಿನಲ್ಲಿ 1 ಗ್ರಾಂಗೆ 500ರಿಂದ 800 ರೂ.ನಂತೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮಾದಕ ವಸ್ತು ಮಾರಾಟ : ಬೆಂಗಳೂರಲ್ಲಿ ನೈಜೀರಿಯನ್ ಪ್ರಜೆ ಅರೆಸ್ಟ್ - Selling Drugs in Bangalore
ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ನೈಜೀರಿಯನ್ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚಿಮಾ ಅಜೋಕು ಎಂದು ಗುರುತಿಸಲಾಗಿದೆ.
ಮಾದಕ ವಸ್ತು ಮಾರಾಟ : ನೈಜೀರಿಯನ್ ಪ್ರಜೆಯನ್ನು ಬಂಧಿಸಿದ ಸಿಸಿಬಿ ಪೊಲೀಸರು
ಆರೋಪಿಯು ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದಾಗ ಸಿಸಿಬಿಯ ಮಾದಕವಸ್ತು ನಿಗ್ರಹ ದಳ ಕಾರ್ಯಾಚರಣೆ ಮೂಲಕ ಬಂಧಿಸಿದೆ. ಬಂಧಿತನಿಂದ ಸುಮಾರು 70 ಲಕ್ಷ ಮೌಲ್ಯದ 800 ಗ್ರಾಂ ಮಾದಕವಸ್ತು, ತೂಕದ ಯಂತ್ರ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದ್ದು, ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಓದಿ :ಅತ್ತೆಯನ್ನು ಕೊಂದ ಅಳಿಯನಿಗೆ ಜೀವಾವಧಿ ಶಿಕ್ಷೆ.. ಕಲಬುರಗಿ ನ್ಯಾಯಾಲಯ ಆದೇಶ