ಕರ್ನಾಟಕ

karnataka

ETV Bharat / city

ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆ ತನಿಖೆಗೆ ಯಾವುದೇ ರಾಜಕೀಯ ಒತ್ತಡ ಇಲ್ಲ- ಕಮಲ್​ ಪಂಥ್​ - drug mafia

ಈ ಪ್ರಕರಣದ ಎಲ್ಲಾ ರೀತಿಯ ತನಿಖೆ ಸರಿಯಾಗಿ ನಡೆಯುತ್ತಿದೆ. ಹಾಗೆ ಸಾಕ್ಷ್ಯ ಪಡೆದು ಆರೋಪಿಗಳನ್ನ ಬಂಧಿಸುವುದಾಗಿ ತಿಳಿಸಿದರು..

Kamal Pant
ಕಮಲ್​ ಪಂಥ್​

By

Published : Sep 7, 2020, 5:17 PM IST

ಬೆಂಗಳೂರು :ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಿಸಿಬಿ ಪೊಲೀಸರು ನಟಿ ರಾಗಿಣಿ ಹಾಗೂ ಇತರೆ ಆರೋಪಿಗಳ ವಿಚಾರಣೆಯನ್ನ ಚುರುಕುಗೊಳಿಸಿದ್ದಾರೆ. ಇದರ ಬಗ್ಗೆ ನಗರ ಪೊಲೀಸ್‌ ಆಯುಕ್ತ ಕಮಲ್ ಪಂಥ್ ಮಾತನಾಡಿ, ಪ್ರಕರಣ ಸಂಬಂಧ ನಮಗೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದಿದ್ದಾರೆ.

ಈ ಪ್ರಕರಣದ ಎಲ್ಲಾ ರೀತಿಯ ತನಿಖೆ ಸರಿಯಾಗಿ ನಡೆಯುತ್ತಿದೆ. ಹಾಗೆ ಸಾಕ್ಷ್ಯ ಪಡೆದು ಆರೋಪಿಗಳನ್ನ ಬಂಧಿಸುವುದಾಗಿ ತಿಳಿಸಿದರು.

ಈ ಪ್ರಕರಣದಲ್ಲಿ ನೇರವಾಗಿ‌ ಬಂಧಿಸಲು ಸಾಧ್ಯವಿಲ್ಲ. ಸೂಕ್ತ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣ ಇನ್ನೂ ತುಂಬಾ ಮುಂದೆ ಹೋಗುವುದು ಇದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.

ABOUT THE AUTHOR

...view details