ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಏಷ್ಯನ್​​ ಸಮ್ಮಿಟ್​​​ ಆನ್ ಎಜ್ಯುಕೇಷನ್ & ಸ್ಕಿಲ್ಸ್​ನ 6ನೇ ಆವೃತ್ತಿಗೆ ಚಾಲನೆ

ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಏಷ್ಯನ್​​ ಸಮ್ಮಿಟ್ ಆನ್ ಎಜ್ಯುಕೇಷನ್ & ಸ್ಕಿಲ್ಸ್​ ಸಮ್ಮೇಳನಕ್ಕೆ ಬೆಂಗಳೂರು ನಗರದಲ್ಲಿ ಚಾಲನೆ ನೀಡಲಾಯ್ತು. ಈ ಕಾರ್ಯಕ್ರಮದಲ್ಲಿ ಸುಮಾರು 15 ದೇಶಗಳ ಸಚಿವರು ಮತ್ತು ಸರ್ಕಾರ ಮಟ್ಟದ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ಏಷಿಯನ್ ಸಮ್ಮಿಟ್ ಆನ್ ಎಜ್ಯುಕೇಷನ್ & ಸ್ಕಿಲ್ಸ್​ನ 6ನೇ ಆವೃತ್ತಿಗೆ ಚಾಲನೆ

By

Published : Sep 24, 2019, 5:20 AM IST

ಬೆಂಗಳೂರು:ಏಷ್ಯಾ ಖಂಡದ ದೇಶಗಳಲ್ಲಿ ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರದಲ್ಲಿ ಇರುವ ಅವಕಾಶಗಳು ಹಾಗೂ ಸವಾಲುಗಳ ಕುರಿತು ನೀತಿ ನಿರೂಪಕರ ಚರ್ಚೆ ಹಾಗೂ ಸಂವಾದಕ್ಕೆ ವೇದಿಕೆ ಒದಗಿಸುವ ಸಮ್ಮೇಳನಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು.

ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮ ಇದಾಗಿದ್ದು, ಐಡಿಎ ಜೊತೆಗೆ ಎಂಹೆಚ್‍ಆರ್​ಡಿ, ನೀತಿ ಆಯೋಗ ಮತ್ತು ಎಂಎಸ್‍ಡಿಇ ಸಹಭಾಗಿತ್ವದಲ್ಲಿ ಆಯೋಜನೆ ಮಾಡಲಾಗಿದೆ.‌

ಈ ವರ್ಷದ ಕಾರ್ಯಕ್ರಮದಲ್ಲಿ ಸುಮಾರು 15 ದೇಶಗಳ ಸಚಿವರು ಮತ್ತು ಸರ್ಕಾರ ಮಟ್ಟದ ಪ್ರತಿನಿಧಿಗಳು ಭಾಗಿಯಾಗಲಿದ್ದು, ನಿನ್ನೆ ಪೂರ್ವಭಾವಿ ಸಭೆ ನಡೆಸಿ ಡಿಸಿಎಂ ಅಶ್ವತ್ಥ್​​​ ನಾರಾಯಣ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭ ಮಾತಾನಾಡಿದ ಡಿಸಿಎಂ ಅಶ್ವತ್ಥ್​​ ನಾರಾಯಣ್, ಶಿಕ್ಷಣ ಕ್ಷೇತ್ರ ಬಹಳ ಮುಖ್ಯ. ಸಮಾಜ ಕಟ್ಟಲು, ಪ್ರಗತಿ ಹಾಗೂ ಸಬಲೀಕರಣಕ್ಕೆ ಶಿಕ್ಷಣ ಅಗತ್ಯ. ಹೀಗಾಗಿ ಸಾಕಷ್ಟು ಸುಧಾರಣೆ ತರಬೇಕಿದೆ. ಈಗಾಗಲೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬರುತ್ತಿದೆ. ನಾವು ರಾಜ್ಯದಲ್ಲಿ ಯಾವ ರೀತಿಯ ಯೋಜನೆ ತರಬೇಕು ಎಂಬುದನ್ನ ಚಿಂತಿಸಲಾಗುವುದು ಎಂದರು.

ಏಷ್ಯನ್​​ ಸಮ್ಮಿಟ್ ಆನ್ ಎಜ್ಯುಕೇಷನ್ & ಸ್ಕಿಲ್ಸ್​ನ 6ನೇ ಆವೃತ್ತಿಗೆ ಚಾಲನೆ

ಈ ಸಂದರ್ಭ ಮಾತನಾಡಿದ ಇಂಡಿಯಾ ಡಿಡಾಕ್ಟಿಕ್ಸ್ ಅಸೋಸಿಯೇಷನ್ (ಐಡಿಎ) ಸಿಇಒ ಆದಿತ್ಯ ಗುಪ್ತಾ, ನಮ್ಮ ಶಿಕ್ಷಣ ವ್ಯವಸ್ಥೆಯು ‘ಎಜ್ಯುಕೇಷನ್ 4.0 ಕಡೆಗೆ ಒಂದು ಬೃಹತ್ ಹೆಜ್ಜೆ ಇರಿಸುತ್ತಿದೆ. ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿ ಸಮುದಾಯ ಮಾಹಿತಿ ಕಲೆಹಾಕುವುದಕ್ಕೆ ಸಂಬಂಧಿಸಿದಂತೆ ಭಾರತವು ಒಂದು ಮಹತ್ವದ ಮತ್ತು ಮಾದರಿ ಬದಲಾವಣೆಗೆ ಸಾಕ್ಷಿಯಾಗುತ್ತಿದೆ.

ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ. 50ರಷ್ಟು ಮಂದಿ 25 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಯುವ ಜನರೇ ಇದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಶಿಕ್ಷಣ ಪಡೆಯುವ ಜನಸಂಖ್ಯೆಯನ್ನು ಹೊಂದಿರುವ ಸಂದರ್ಭದಲ್ಲಿ ಭಾರತದ ಈ ಯುವ ಬ್ರಿಗೇಡ್‍ಗಳನ್ನು ಭವಿಷ್ಯಕ್ಕಾಗಿ, ಭವಿಷ್ಯದ ಸವಾಲುಗಳನ್ನು ಎದುರಿಸಲು ಎಲ್ಲ ರೀತಿಯ ಕೌಶಲ್ಯ ಮತ್ತು ನವ-ನವೀನ ದೃಷ್ಟಿಕೋನಗಳೊಂದಿಗೆ ಸಿದ್ಧಪಡಿಸಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ನೀತಿಗಳನ್ನು ಸಿದ್ಧಪಡಿಸಲು ಹೆಚ್ಚು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.

ABOUT THE AUTHOR

...view details