ದೇವನಹಳ್ಳಿ : ಅನಿವಾಸಿ ಭಾರತೀಯ ಡಾ.ರೊನಾಲ್ಡ್ ಕೊಲೊಸೊರವರಿಗೆ ಫ್ರಾನ್ಸ್, ಯೂರೋಪಿಯನ್ ಇಂಟರ್ ನ್ಯಾಶನಲ್ ಯುನಿವರ್ಸಿಟಿ ಪ್ಯಾರಿಸ್ ಗ್ಲೋಬಲ್ ಲೀಡರ್ ಶಿಪ್ ಮತ್ತು ಮ್ಯಾನೇಜ್ಮೆಂಟ್ ಸಾಧನೆಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ದೇವನಹಳ್ಳಿಯ ಕ್ಲಾರ್ಕ್ ಎಕ್ಸೋಟಿಕ ರೆಸಾರ್ಟ್ನಲ್ಲಿ ಫ್ರಾನ್ಸ್ ದೇಶದ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದ ಡಾ.ರೊನಾಲ್ಡ್ ಕೊಲೊಸೊರವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ವಿಧಾನಪರಿಷತ್ ಸದಸ್ಯ ಭೋಜೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಅನಿವಾಸಿ ಭಾರತೀಯ ಡಾ.ರೊನಾಲ್ಡ್ ಕೊಲೊಸೊರವರಿಗೆ ಫ್ರಾನ್ಸ್ ವಿವಿ ಗೌರವ ಡಾಕ್ಟರೇಟ್.. ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಸಚಿವ ಸದನಾಂದಗೌಡ ಮಾತನಾಡಿ, ಡಾ.ರೊನಾಲ್ಡ್ ಕೊಲೊಸೊ ರವರಿಗೆ ಬಂದ ಡಾಕ್ಟರೇಟ್ ಇಡೀ ದೇಶಕ್ಕೆ ಬಂದದ್ದು. ಪ್ರಪಂಚದ ಪ್ರತಿಷ್ಠಿತ ಯುನಿವರ್ಸಿಟಿ ಭಾರತದ ಡಾ.ರೊನಾಲ್ಡ್ ಕೊಲೊಸೊರವರ ಸಾಮಾಜಿಕ ಸೇವೆಗೆ ಗೌರವ ಡಾಕ್ಟರೇಟ್ ನೀಡಿರುವುದು ನಮಗೆ ಗೌರವ ನೀಡಿದಷ್ಟಿ ಖುಷಿಯಾಗಿದೆ ಎಂದರು.
ಓದಿ-ಬೆಂಬಲಿಗರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಠಾಣೆಗೆ ಮುತ್ತಿಗೆ ಹಾಕಿದ ಶಾಸಕ ಶರತ್ ಬಚ್ಚೇಗೌಡ
ಡಾ.ರೊನಾಲ್ಡ್ ಕೊಲೊಸೊರವರು ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ನಾನು ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದೇನೆ. ಯಾವುದೇ ಪ್ರಶಸ್ತಿ ಗೌರವ ಪಡೆಯುವ ಕಾರಣಕ್ಕೆ ನಾನು ಸಾಮಾಜ ಸೇವೆ ಮಾಡುತ್ತಿಲ್ಲ, ಅದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ನಾನು ವಿದೇಶದಲ್ಲಿ ನೆಲೆಸಿದ್ದು ರಜೆಯಲ್ಲಿ ಭಾರತಕ್ಕೆ ಬಂದಾಗ ನಾನು ಬೆಳೆದ ಸಮಾಜಕ್ಕೆ ಸೇವೆ ಮಾಡುವ ಕಾರಣಕ್ಕೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದೆನೆ ಎಂದರು.