ಬೆಂಗಳೂರು: ಕೋವಿಡ್-19 ಹಾಗೂ ಉದ್ಯಮ ಜಾಗೃತಿ ಚರ್ಚೆಯಲ್ಲಿ ಮಾತನಾಡಿದ ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ್ ಮೇ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಿತ್ಯ 20-25 ಸಾವಿರ ಕೇಸ್ ಬರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
ಚುನಾವಣೆ ಆಯೋಗ ರಾಜ್ಯಗಳಲ್ಲಿ ಈ ಸಂದರ್ಭದಲ್ಲಿ ಚುನಾವಣೆ ಆಯೋಜನೆ ಮಾಡಬಾರದಿತ್ತು ಹಾಗೂ ಕುಂಭ ಮೇಳ ಸೇರಿದಂತೆ ಜಾತ್ರೆಗಳನ್ನ ನಿರ್ಬಂಧನೆ ಮಾಡಬೇಕು ಎಂದು ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೋವಿಡ್ ದಿನದಿಂದ ದಿನಕ್ಕೆ ದ್ವಿಗುಣ ಆಗುತ್ತಿದೆ. ಪಾಸಿಟಿವಿಟಿ ರೇಟ್ ಕೂಡ ಡಬಲ್ ಸಂಖ್ಯೆಯಲ್ಲಿ ಮೊದಲ ಬಾರಿಗೆ ತಲುಪಿದೆ. ಅನ್ಲಾಕ್ ನಂತರ ಮದುವೆ ಹಾಗೂ ಇನ್ನಿತರ ಸಮಾರಂಭಗಳು ಯಾವುದೇ ರೀತಿ ಕೋವಿಡ್ ನಿಯಮ ಪಾಲನೆ ಮಾಡದೇ ನಡೆದಿದೆ. ಇನ್ನು 6 ತಿಂಗಳು ಮಾಸ್ಕ್ ನಮ್ಮ ಸಂಸ್ಕೃತಿ ಆಗಬೇಕು, ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡು ಸಮರ್ಪಕವಾಗಿ ಇದೆ. ಲಸಿಕೆ ಪಡೆದ ನಂತರ ಜ್ವರ ಮೈ ನೋವು ಬಂದರೆ ಅದು ಲಸಿಕೆ ಅಡ್ಡ ಪರಿಣಾಮ ಅಲ್ಲ ಎಂದು ವಿವರಿಸಿದರು.